ಹಿರಿಯರ ಮಾರ್ಗದರ್ಶನದಲ್ಲಿ ಕೈ ಪಕ್ಷ ಕಟ್ಟೋಣ

Let's join hands under the guidance of elders.
Published on

ಮಹಾಲಿಂಗಪುರ: ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಯುವ ಸಮೂಹ ಸಂಘಟಿಸುವ ಪ್ರಯತ್ನ ಮಾಡುತ್ತೇನೆ ಎಂದು ತೇರದಾಳ ಮತಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಪೂಜಾರಿ ಹೇಳಿದರು.

ಪಟ್ಟಣದ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾವುದೇ ಜಾತಿ, ಮತ, ಪಂಥಗಳ ಭೇದಭಾವವಿಲ್ಲದೆ, ಸರ್ವೇ ಜನ ಜನ ಸುಖಿನೋ ಭವಂತು ಎಂಬ ತತ್ವದ ಆಧಾರದ ಮೇಲೆ ಆಡಳಿತ ಮಾಡುತ್ತಿದೆ. ಈ ಸಿದ್ಧಾಂತ ಒಪ್ಪಿಕೊಳ್ಳುವವರನ್ನು ಪಕ್ಷಕ್ಕೆ ಸೇರಿಸಿಕೊಂಡು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುನೀಲ ಹರಿಜನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತ ಲಟ್ಟಿ, ರಬಕವಿ-ಬನಹಟ್ಟಿ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಶೇಖ್, ಅಜಯ ಗಾಣಿಗೇರ, ಯುವ ಕಾಂಗ್ರೆಸ್ ತೇರದಾಳ ಮಂಡಲ ಅಧ್ಯಕ್ಷ ಇಲಿಯಾಸ್ ಯಾದವಾಡ, ಯಲ್ಲಪ್ಪ ಭಜಂತ್ರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net