ನರಗುಂದ: ಲಿಂಗತ್ವ ಆಧಾರಿತ ದೌರ್ಜನ್ಯ ಕೊನೆಗಾಣಿಸಲು ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಂಜೀವಿನಿ ಯೋಜನೆ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮೋಹನ ಕೃಷ್ಣ ಹೇಳಿದರು.
ಜಿಪಂ, ತಾಪಂ, ಕೌಶಾಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಜ್ಯ ಜೀವನೋಪಾಯ ಅಭಿಯಾನದಡಿ ತಾಲೂಕಿನ ಬನಹಟ್ಟಿಯ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಏರ್ಪಡಿಸಿದ್ದ ಲಿಂಗತ್ವ ಆಧಾರಿತ ದೌರ್ಜನ್ಯದ ವಿರುದ್ಧ ರಾಷ್ಟ್ರೀಯ ಅಭಿಯಾನದ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರು ಸಹನಾ ಮೂರ್ತಿಗಳಾಗಿದ್ದಾರೆ. ಅವರಿಗೆ ಎಂಥ ಸಮಸ್ಯೆ ಎದುರಾದರೂ ಕುಗ್ಗದೆ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಶತಮಾನಗಳಿಂದ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು. ಈ ಬಗ್ಗೆ ಶರಣರು, ಸಾಧು, ಸಂತರು ಜಾಗೃತಿ ಮೂಡಿಸಿದರೂ ಪ್ರಯೋಜನವಾಗಿರಲಿಲ್ಲ. ಈಗ ಸಂವಿಧಾನ ಮಹಿಳೆಯರ ನೆರವಿಗೆ ಬಂದಿದೆ. ಪುರುಷರು ಆತ್ಮಾವಲೋಕನ ಮಾಡಿಕೊಂಡು ಉದ್ಯೋಗದ ಸ್ಥಳ, ಕುಟುಂಬ ನಿರ್ವಹಣೆಯಲ್ಲಿ ಬೆನ್ನೆಲುಬಾಗಿ ನಿಲ್ಲುವ ಮೂಲಕ ದೇಶದ ಏಳಿಗೆಗೆ ಕೈಜೋಡಿಸಬೇಕಿದೆ ಎಂದು ತಿಳಿಸಿದರು. ಗ್ರಾಪಂ ಮಟ್ಟದ ಸಂಜೀವಿನಿ ಯೋಜನೆ ಮಹಿಳಾ ಒಕ್ಕೂಟದಿಂದ ಪ್ರಬಂಧ ಸ್ಮರ್ಧೆ ನಡೆದು, 22 ಮಕ್ಕಳು ಭಾಗಿಯಾಗಿದ್ದರು. ಮುಖ್ಯೋಪಾಧ್ಯಾಯ ಎಸ್.ವೈ. ಪಾಟೀಲ, ಒಕ್ಕೂಟದ ಸದಸ್ಯೆ ಲಲಿತಾ ಮೇಟಿ, ಲಕ್ಷ್ಮೀ ಗಾಯಕವಾಡ, ರಾಜೇಶ್ವರಿ ಗೌಡಪ್ಪಗೌಡ್ರ ಪಾಲ್ಗೊಂಡಿದ್ದರು.
ಫೋಟೋ 13 ಎನ್ಆರ್ಡಿ-1

ನರಗುಂದ ತಾಲೂಕಿನ ಬನಹಟ್ಟಿ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ಲಿಂಗತ್ವ ಆಧಾರಿತ ದೌರ್ಜನ್ಯ ವಿರುದ್ಧ ರಾಷ್ಟ್ರೀಯ ಅಭಿಯಾನ ಪ್ರಬಂಧ ಸ್ಪರ್ಧೆಗೆ ಮೋಹನಕೃಷ್ಣ ಚಾಲನೆ ನೀಡಿದರು. ಎಸ್.ವೈ. ಪಾಟೀಲ, ಲಲಿತಾ ಮೇಟಿ, ಲಕ್ಷ್ಮೀ ಗಾಯಕವಾಡ, ಇತರರಿದ್ದರು.