

ತಲ್ಲೂರ: ಸಾರ್ವಜನಿಕರು ತಾವು ವಾಸಿಸುವ ಪ್ರದೇಶ ಶುಚಿಯಾಗಿಟ್ಟುಕೊಳ್ಳುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಬೇಕು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಆಲದಕಟ್ಟಿ ಕೆ.ಎಂ ಗ್ರಾಮದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಈಚೆಗೆ ಹಮ್ಮಿಕೊಂಡಿದ್ದ ಮಲತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಜತೆಗೆ ಸಾರ್ವಜನಿಕರು ವ್ಯವಸ್ಥಿತವಾಗಿ ಕೆಲಸ ಮಾಡಿಸಿಕೊಳ್ಳಬೇಕು. ಜನರು ಸಮಸ್ಯೆಗಳಿದ್ದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಅಶೋಕ ಚಿಕ್ಕೊಪ್ಪ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಗೂ ಆದ್ಯತೆ ನೀಡುತ್ತಿದೆ. ಹೀಗಾಗಿ, ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈರಯ್ಯಶಾಸ್ತ್ರಿ, ಗ್ರಾಪಂ ಅಧ್ಯೆ ಪ್ರೇಮಾ ಡಮ್ಮಣಗಿ, ಉಪಾಧ್ಯೆ ಶೋಭಾ ಮಾದರ, ಪಿಡಿಒ ಎಚ್.ಕೆ.ಚೌರಡ್ಡಿ, ಫಕೀರಪ್ಪ ಸಣ್ಣಗೌಡ್ರ, ಜಾನವ್ವ ಆಡಿನ, ಸುರೇಶ ಮುಗಳಿ, ಬೆಮುಲ ನಿರ್ದೇಶಕ ಶಂಕರ ಇಟ್ನಾಳ, ನೀಲಕಂಠ ಶಿದ್ದಬಸನ್ನವರ, ಶಿವಪ್ಪ ಗುರನಗೌಡ್ರ, ಪ್ರಕಾಶ ವಾಲಿ, ಬಸವರಾಜ ಯರಗಟ್ಟಿ, ಗೌಡಪ್ಪ ಸಣ್ಣಗೌಡ್ರ, ಚಂದ್ರಗೌಡ ಸಣ್ಣಗೌಡ್ರ, ಮಹಾಂತೇಶ ಕಡಕೊಳ, ಶಿವಪ್ಪ ಸಣ್ಣಗೌಡ್ರ, ಫಕೀರವ್ವ ಪವಾಡೆಪ್ಪನವರ, ಚನಬಸವ್ವ ಸಣ್ಣಗೌಡ್ರ, ಸುವರ್ಣ ಹಿರೇಮಠ, ಶಶಿಕಲಾ ನಂಜನವರ ಇತರರಿದ್ದರು.