

ಅರಟಾಳ: ಹಾಲಳ್ಳಿ ವಿವಿಧೋದ್ದೇಶ ಪಿಕೆಪಿಎಸ್ ಸಂಘ ಪ್ರಸಕ್ತ ವರ್ಷ 15.87 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕಳಸಪ್ಪ ಹೊನಗೌಡ ಹೇಳಿದರು.
ಸಮೀಪದ ಹಾಲಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಸಹಕಾರ ಸಂಘ ಬೆಳೆಸಿದರೆ ಅದು ನಮ್ಮನ್ನು ಬೆಳೆಸುತ್ತದೆ. ಸಕಾಲಕ್ಕೆ ಸಾಲ ಮರುಪಾವತಿಸಿ ಸಂಘದ ಪ್ರಗತಿಗೆ ಕೈಜೋಡಿಸಬೇಕು. ರೈತರಿಗಾಗಿ ಗೊಬ್ಬರ, ಬೀಜ ವಿತರಿಸುವ ಕೆಲಸ ಮಾಡಲಾಗುವುದು ಎಂದರು.
ಸಂಘದ ಕಾರ್ಯದರ್ಶಿ ಅನಿಲ ಬೇಡರಟ್ಟಿ ಮಾತನಾಡಿ, ರೈತರು, ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸಹಕಾರದಿಂದ ಸಂಘ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದರು. ಉಪಾಧ್ಯಕ್ಷೆ ನಿಂಬೆವ್ವ ಕಲಶೆಟ್ಟಿ, ಸದಸ್ಯರಾದ ಬಸವರಾಜ ಹೊನಗೌಡ, ದುಂಡಪ್ಪ ಸತ್ತಿ, ಗುರಲಿಂಗ ಹೊನಗೌಡ, ಧರೇಪ್ಪ ಬ್ಯಾಡರಟ್ಟಿ, ಮಲ್ಲಪ್ಪ ಹೊನಗೌಡ, ಸಂಗಪ್ಪ ಹತ್ತರಕಿ, ಸತ್ಯವ್ವ ಐಗಳಿ, ಬಸಪ್ಪ ಕುರುಬರ, ಸತ್ಯಪ್ಪ ಸನದಿ, ಚನ್ನಪ್ಪ ಕಾಂಬಳೆ, ಮುಖ್ಯ ಕಾರ್ಯನಿರ್ವಾಹಕ ಅನಿಲ ಬ್ಯಾಡರಟ್ಟಿ, ವಿಜಯಕುಮಾರ ಅಥಣಿ, ಕುಮಾರ ಹೊನಗೌಡ, ಸದಾಶಿವ ಅಥಣಿ ಇತರರು ಇದ್ದರು.