ಸರ್ಕಾರಿ ಶಾಲೆಗಳ ಪ್ರಗತಿಗೆ ಕೈಜೋಡಿಸಲಿ

Untitled-3
ಮುಳಬಾಗಿಲು ತಾಲೂಕಿನ ಕನ್ನತ್ತ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಮ್ಮೆನತ್ತ ವೆಂಕಟೇಶ್​ ಎಮ್ಮೆನತ್ತ ಕ್ಲಸ್ಟರ್​ ಮಟ್ಟದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ನೋಟ್​ ಪುಸ್ತಕ ಮತ್ತು ಲೇಖನಿ ಸಾಮಾಗ್ರಿ ವಿತರಿಸಿದರು. ಬಿಇಒ ಕೆ.ಎನ್​.ರಾಮಚಂದ್ರಪ್ಪ, ಬಿಆರ್​ಸಿ ಸಂಯೋಜಕ ಪಿ. ಸೋಮೇಶ್​ ಇದ್ದರು.
Published on

ಮುಳಬಾಗಿಲು : ಸರ್ಕಾರಿ ಶಾಲೆಗಳಿಗೆ ದಾನಿಗಳು ನೀಡುವ ಪ್ರತಿಯೊಂದು ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರು ಕೈಜೋಡಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎನ್​. ರಾಮಚಂದ್ರಪ್ಪ ಹೇಳಿದರು.

ತಾಲೂಕಿನ ಕನ್ನತ್ತ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಮ್ಮೆನತ್ತ ಕ್ಲಸ್ಟರ್​ಮಟ್ಟದ ಸರ್ಕಾರಿ ಶಾಲೆ ಮಕ್ಕಳಿಗೆ ದಾನಿ ಎಮ್ಮೆನತ್ತ ವೆಂಕಟೇಶ್​ ಅವರು ನೀಡಿದ ಉಚಿತ ನೋಟ್​ ಪುಸ್ತಕ ಮತ್ತು ಲೇಖನಿ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಹಲವು ರೀತಿಯ ಮೂಲ ಸೌಲಭ್ಯಗಳಿಗೆ ಅನುಕೂಲವಾಗಿ ದಾನಿಗಳು ಸಹಾಯ ಮಾಡುತ್ತಿರುವುದು ಸ್ವಾಗತಾರ್ಹ. ಎಮ್ಮೆನತ್ತ ಕ್ಲಸ್ಟರ್​ಮಟ್ಟದಲ್ಲಿ ಸಾಕಷ್ಟು ಶಾಲೆಗಳಲ್ಲಿ ಶಿಕ್ಷಕರು ಶ್ರಮಪಟ್ಟು ದಾನಿಗಳಿಂದ ನಾನಾ ಬಗೆಯ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಅವರೆಲ್ಲರಿಗೂ ಇಲಾಖೆಯ ಪರ ಅಭಿನಂದನೆಗಳನ್ನು ಸಲ್ಲಿಸಲಾಗುತ್ತದೆ. ಹಾಗಾಗಿ ಈ ಭಾಗದ ಸಾಕಷ್ಟು ಶಾಲೆಗಳಲ್ಲಿಯೂ ದಾಖಲಾತಿ ಪ್ರಮಾಣ ಸುಧಾರಿಸಿಕೊಂಡಿದೆ ಎಂದರು.

ಸಮಾಜ ಸೇವಕ ಎಮ್ಮೆನತ್ತ ವೆಂಕಟೇಶ್​ ಮಾತನಾಡಿ, ಪ್ರತಿ ವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡಿಕೊಂಡು ಬರಲಾಗುತ್ತಿದೆ. ಇದಕ್ಕೆ ಶಿಕ್ಷಣ ಇಲಾಖೆ ತುಂಬಾ ಸಹಕಾರ ನೀಡುತ್ತಿದೆ. ಇದೇ ರೀತಿ ಮುಂದಿನ ದಿನಗಳಲ್ಲಿಯೂ ಸಹಕಾರ ನೀಡಿದರೆ ಇನ್ನೂ ಹೆಚ್ಚಿನ ರೀತಿ ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಕನ್ನತ್ತ ಶಾಲೆಯ ಮುಖ್ಯಶಿಕ್ಷಕ ಎಂ.ಫಕ್ರುದ್ದೀನ್​, ಸಿಆರ್​ಪಿಗಳಾದ ಶಿವಕುಮಾರ್​, ಅನಿಲ್​ ಕುಮಾರ್​, ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ರಹೀಂ ಶರೀಫ್​, ಎಮ್ಮೇನತ್ತ ಕ್ಲಸ್ಟರ್​ ಮಟ್ಟದ ವಿವಿಧ ಶಾಲೆಗಳ ಶಿಕ್ಷಕರಾದ ಕೆ.ಎನ್​.ತಾಯಲೂರಪ್ಪ, ರೆಡ್ಡಪ್ಪ, ಆಂಜಿನಪ್ಪ, ಶ್ರೀನಿವಾಸ್​, ಗೋವಿಂದೇಗೌಡ, ರಾಜೇಶ್ವರಿ, ಮಂಜುನಾಥ್​, ಜಿ.ಕೆ.ನಾರಾಯಣಸ್ವಾಮಿ, ಚಂದ್ರಕಲಾ, ನೇತ್ರಾವತಿ, ಆರತಿ, ಯಲ್ಲಪ್ಪ, ಸುಲೋಚನಾ, ಗೀತಮ್ಮ, ಶೇಷಾಪುರ ಶ್ರೀನಿವಾಸ್​, ಶ್ರೀರಾಮಪ್ಪ, ರಾಧಾ, ಪದ್ಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net