

ರಾಮದುರ್ಗ: ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಶೈಕ್ಷಣಿಕ ರಂಗದಲ್ಲಿ ಉನ್ನತ ಮಟ್ಟದ ಪ್ರಗತಿ ಸಾಽಸುವಂತೆ ಧಾರವಾಡದ ಐಡಿಎಫ್ ಕಿರು ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎನ್.ಎಂ.ಪಾಟೀಲ ಕರೆ ನೀಡಿದರು.
ತಾಲೂಕಿನ ಸುನ್ನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚಟುವಟಿಕೆ ಉದ್ಘಾಟನೆ ಹಾಗೂ ಐಡಿಎಫ್ ಸಂಸ್ಥೆ ನೀಡಿದ ೫ ಲಕ್ಷ ರೂ. ಮೊತ್ತದ ಸಾಮಗ್ರಿ ವಿತರಿಸಿ ಮಾತನಾಡಿ, ಶಿಕ್ಷಣ ಇಲಾಖೆ ಹಾಗೂ ಸಂಸ್ಥೆಯಿAದ ದೊರೆತ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಽಕಾರಿ ಆರ್.ಟಿ.ಬಳಿಗಾರ ಮಾತನಾಡಿ, ನನ್ನ ಶಾಲೆ ನನ್ನ ಕೊಡುಗೆ ಅಡಿಯಲ್ಲಿ ಸಮುದಾಯ ಹಾಗೂ ದಾನಿಗಳ ಸಹಾಯದಿಂದ ಶಿಕ್ಷಣ ಮಟ್ಟ ಸುಧಾರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಧಾರವಾಡದ ಐಡಿಎಫ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಮುಖ್ಯ ಶಿಕ್ಷಕಿ ಎಂ.ಎಚ್.ಭಜAತ್ರಿ ಮಾತನಾಡಿದರು. ಹರ್ಲಾಪೂರ ಢವಳೇಶ್ವರ ಮಠದ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಂಸ್ಥೆಯ ನಿರ್ದೇಶಕ ಹನುಮಂತ ಕುಲಗೋಡ, ಮಹಾದೇವಪ್ಪ ಕುಲಗೋಡ, ನಿಂಗನಗೌಡ ಪಾಟೀಲ, ಹನುಮಂತ ಕೋಟಗಿ, ಮಂಜುನಾಥ ಕುಲಗೋಡ, ಲಿಂಬನಗೌಡ ಪಾಟೀಲ, ದುರ್ಗವ್ವ ಮಾದರ, ಎಸ್.ಎಸ್.ಭಾವ್ಕರ್, ರಾಘವೇಂದ್ರ ಎಚ್., ಬಸವರಾಜ ಅಳಗವಾಡಿ, ಸೋಮಶೇಖರ ಕೋಲ್ಕಾರ, ಮಹಾಂತೇಶ ದಾಸನಾಳ, ಸಿ.ಎನ್.ಕಲ್ಲೂರ, ಮಹಾಂತೇಶ ಪಾಶ್ಚಾಪುರ, ಎಂ.ಎನ್.ಬೆನ್ನೂರ, ಗ್ರಾಪಂ ಅಭಿವೃದ್ಧಿ ಅಽಕಾರಿ ಸೋಮಶೇಖರ ಹೊಂಗಲ ಇತರರಿದ್ದರು. ಜಿ.ಎ.ಶೇಖ ಸ್ವಾಗತಿಸಿದರು. ಎಸ್.ಎ.ಬಾಣಕಾರ ನಿರೂಪಿಸಿದರು. ಮಾರುತಿ ದೊಡ್ಡಮನಿ ವಂದಿಸಿದರು.