

ಕುವೆಂಪುನಗರದ ಕಲಾ ಸುರುಚಿ ಸಂಸ್ಥೆಯಲ್ಲಿ ಆ. 26ರಂದು ಸಂಜೆ 4.30ರಿಂದ 5.30ರವರೆಗೆ ಮಕ್ಕಳಿಗಾಗಿ ‘ಕಥೆ ಕೇಳೋಣ ಬನ್ನಿ-790’ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಷ್ಟ್ರಪತಿ ಚಿನ್ನದ ಪದಕ ವಿಜೇತ ಅಮ್ಮ ರಾಮಚಂದ್ರ ಮಕ್ಕಳಿಗೆ ಕಥೆ ಹೇಳಲಿದ್ದಾರೆ.
ಸದ್ವಿದ್ಯಾ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿರುವ ಶತೋತ್ತರ, ಸುವರ್ಣ, ರಜತ ಮಹೋತ್ಸವ ಸಮಾರಂಭ ಅಂಗವಾಗಿ ಆ.27 ರಂದು ಸಂಜೆ 6ಕ್ಕೆ ವಿದ್ಯಾಸಂಸ್ಥೆಯ ಟಿ.ಪಿ.ಕೈಲಾಸಂ ರಂಗಮಂಟಪದಲ್ಲಿ ವಿದುಷಿ ಡಾ.ಜಯಂತಿ ಕುಮರೇಶ್ ಅವರಿಂದ ವೀಣಾ ವಾದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಕವಾದ್ಯದಲ್ಲಿ ಕುಮರೇಶ್(ವಯೊಲಿನ್), ಅರ್ಜುನ್ ಕುಮಾರ್(ಮೃದಂಗ), ಗುರುಪ್ರಸನ್ನ (ಖಂಜಿರ) ಸಹಕರಿಸಲಿದ್ದಾರೆ.