

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ಸಹಯೋಗದಲ್ಲಿ ಮತ ಜಾಗೃತಿ ಅಭಿಯಾನ, ಜಾಥಾ, ಬೀದಿ ನಾಟಕ ಪ್ರದರ್ಶನವನ್ನು ಶುಕ್ರವಾರ ಆಯೋಜಿಸಲಾಗಿತ್ತು.
ಫೌಂಟೇನ್ ವೃತ್ತದ ಬಳಿ ಇರುವ ಕಾಲೇಜಿನಲ್ಲಿ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಚಾಲನೆ ನೀಡಿದರು.
ಬಳಿಕ ವಿದ್ಯಾರ್ಥಿಗಳು ಪ್ರಮುಖ ರಸ್ತೆಯಲ್ಲಿ ಜಾಥಾ ನಡೆಸಿ ಮತದಾನದ ಅರಿವು ಮೂಡಿಸಿದರು. ‘ಮತಗಟ್ಟೆಗೆ ಹೋಗೋಣ, ಮತವನ್ನು ಹಾಕೋಣ’, ‘ಮತವೂ ನಮ್ಮದು, ಆಯ್ಕೆಯೂ ನಮ್ಮದು’, ‘ಮಾರಬೇಡಿ ಮತವನ್ನು, ಮರೆಯಬೇಡಿ ಸ್ವಾಭಿಮಾನವನ್ನು’, ‘ಮತದಾನ ನಮ್ಮ ಹಕ್ಕು, ಚಲಾಯಿಸುವುದು ನಮ್ಮ ಕರ್ತವ್ಯ…ಹೀಗೆ ವಿವಿಧ ಘೋಷಣೆ ಬರೆದ ನಾಮಫಲಕಗಳು ರಾರಾಜಿಸಿದವು.
ಪ್ರಾಂಶುಪಾಲ ಎಂ.ಪ್ರಕಾಶ್, ವಿಶೇಷಾಧಿಕಾರಿ ದೊಡ್ಡಯ್ಯ, ಎನ್‌ಎಸ್‌ಎಸ್ ಅಧಿಕಾರಿಗಳಾದ ಎಸ್.ಎಂ.ಮಧುಸೂದನ್, ಕೆ.ಶ್ರೀನಿವಾಸ್, ಕಸಪಾ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಮ.ನ.ಲತಾಮೋಹನ್, ಡಾ.ಚೀಲೂರು ಚಂದ್ರಶೇಖರ್, ಜಿ.ಪ್ರಕಾಸ್, ಕೆ.ಕೆಂಪಣ್ಣ, ಮೈ.ನಾ.ಲೋಕೇಶ್ ಇನ್ನಿತರರಿದ್ದರು.