

ತಾವರಗೇರಾ: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಸ್ಸಿ,ಎಸ್ಟಿ ಸಮುದಾಯದ ಜನರ ಕುಂದುಕೊರತೆಗಳನ್ನು ಪರಿಹರಿಸುವ ಮಾಸಿಕ ಸಭೆ ಸೋಮವಾರ ನಡೆಯಿತು. ದಲಿತರ ಸ್ಮಶಾನದ ಸ್ಥಳ ಕೇವಲ ಮೂರು ಗುಂಟೆ ಮಾತ್ರ ಇದೆ.
ಹಲವಾರು ವರ್ಷಗಳಿಂದ ಅಷ್ಟೇ ಜಾಗದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಬಹಳಷ್ಟು ಬಾರಿ ಹಳೇ ಕುಣಿಯಲ್ಲೇ ಹೂಳುವ ಅನಿವಾರ್ಯ ಸ್ಥಿತಿ ಬಂದೊದಗಿದೆ. ಆದ್ದರಿಂದ ಸ್ಮಶಾನಕ್ಕೆ ಇನ್ನಷ್ಟು ಜಾಗ ಕಲ್ಪಿಸಬೇಕು ಎಂದು ಸಮುದಾಯದವರು ಬೇಡಿಕೆ ಸಲ್ಲಿಸಿದರು. ಕಂದಾಯ ಇಲಾಖೆಯ ಗ್ರಾಮ ಅಧಿಕಾರಿ ಸೂರ್ಯ ಕಾಂತ ಮಾತನಾಡಿ, ಈ ಸಮಸ್ಯೆಯನ್ನು ತಹಸೀಲ್ದಾರ್ ಗಮನಕ್ಕೆ ತರಲಾಗುವುದು ಎಂದರು.