

ಖಾನಾಪುರ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಸೇನೆ ಕೈಗೊಂಡ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ನಮ್ಮ ಸೈನಿಕರ ತ್ಯಾಗ ಅಪಾರ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ತಿರಂಗಾ ಯಾತ್ರೆಯಲ್ಲಿ ಮಾತನಾಡಿ, ದೇಶದ ಪ್ರತಿಯೊಬ್ಬ ನಾಗರಿಕನ ಸುರಕ್ಷತೆಗೆ ನಮ್ಮ ಸೇನೆ ತೆಗೆದುಕೊಂಡ ಕ್ರಮ ಶ್ಲಾಘನೀಯ. ದೇಶವನ್ನು ಸಮದ್ಧ ಮತ್ತು ಬಲಿಷ್ಠವಾಗಿಸಲು ನಾವೆಲ್ಲರೂ ಭಾರತೀಯ ಸೈನಿಕರೊಂದಿಗೆ ನಿಲ್ಲಬೇಕು ಎಂದು ಕರೆ ನೀಡಿದರು.
ಪಟ್ಟಣದ ವಿವಿಧೆಡೆ ತಿರಂಗ ಯಾತ್ರೆ ಸಂಚರಿಸಿತು.ಅವರೊಳ್ಳಿ ಮಠದ ಚನ್ನಬಸವ ದೇವರು, ಶಾಂಡಿಲೇಶ್ವರ ಮಹಾರಾಜರು, ಶಾಸಕ ವಿಠ್ಠಲ ಹಲಗೇಕರ, ಮಾಜಿ ಶಾಸಕ ಅರವಿಂದ ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಸಾಣಿಕೊಪ್ಪ, ಮಾಜಿ ಅಧ್ಯಕ್ಷ ಸಂಜಯ ಕುಬಲ್, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಮನೋಹರ ಕದಂ, ಚೇತನ್ ಮನೇರಿಕರ, ಪಂಡಿತ ಓಗ್ಲೆ, ಕಿರಣ ಏಳೂರಕರ್, ಬಾಬುರಾವ್ ದೇಸಾಯಿ, ಧನಶ್ರೀ ಸರ್ದೇಸಾಯಿ, ಗುಂಡು ತೋಪಿನಕಟ್ಟಿ, ಮಾಜಿ ಸೈನಿಕರು ಇತರರಿದ್ದರು.