ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡೋಣ

1
ಬೈಲಹೊಂಗಲದಲ್ಲಿ ಹಜರತ್ ಖ್ವಾಜಾ ಗರೀಬ್ ನವಾಜ್ 812ನೇ ಉರುಸ್ ನಿಮಿತ್ತ ಏರ್ಪಡಿಸಿದ್ದ ಚಟ್ಟಿ ಶರ್ೀ ಕಾರ್ಯಕ್ರಮದಲ್ಲಿ ಹಾಫೀಜ್ ಅಮಾನುಲ್ಲಾ, ಅಬ್ದುಲ್‌ವಹೀದ್, ಸಯ್ಯದ್‌ಮೀರಅಲಿ ಉಸ್ಮಾನ್, ಹಾಫೀಜ್ ಅಶ್ಪಾಕ್ ಶೇಖ್ ಇತರರನ್ನು ಸತ್ಕರಿಸಲಾಯಿತು.
Published on

ಬೈಲಹೊಂಗಲ: ದೇಶದಲ್ಲಿ ಶಾಂತಿ-ಸೌಹಾರ್ದತೆ ನೆಲೆಸಲು ಸೂಫಿ ಸಂತರ ಕೊಡುಗೆ ಅಪಾರವಾಗಿದೆ. ಧರ್ಮದ ಹೆಸರಿನಲ್ಲಿ ಕಚ್ಚಾಡುವ ಬದಲು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಎಂದು ಮುಸ್ಲಿಂ ಧರ್ಮಗುರು ಸೂಫಿ ಅಬ್ದುಲ್‌ರಜಾಕ್ ಖಾದ್ರಿ ವಹಾಮಿ ಹೇಳಿದರು.

ಪಟ್ಟಣದ ಹೊಸೂರ ರಸ್ತೆಯಲ್ಲಿರುವ ಬೈಲಹೊಂಗಲ ಸಿಟಿ ಹಾಲ್‌ನಲ್ಲಿ ಮುಸ್ಲಿಂ ಸಮುದಾಯದಿಂದ ದೇಶದ ಮಹಾನ್ ಸೂಫಿ ಹಜರತ್ ಖ್ವಾಜಾ ಗರೀಬ್ ನವಾಜ್ ಅವರ ಉರುಸ್ ಕಾರ್ಯಕ್ರಮ ನಿಮಿತ್ತ ಗುರುವಾರ ಏರ್ಪಡಿಸಿದ್ದ ಚಟ್ಟಿ ಶರ್ೀ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಮುಸ್ಲಿಂ ಧರ್ಮಗುರುಗಳಾದ ಧಾರವಾಡದ ಹಾಫೀಜ್ ಅಮಾನುಲ್ಲಾ, ಬೆಳಗಾವಿಯ ಅಬ್ದುಲವಹೀದ್, ಸಯ್ಯದ್ ಮೀರಅಲಿ ಉಸ್ಮಾನ್, ಹಾಫೀಜ್ ಅಶ್ಪಾಕ್‌ಶೇಖ್, ಮೌಲಾನಾ ಮಕ್ಸೂದ್, ಬೈಲಹೊಂಗಲದ ಧರ್ಮಗುರು ಲತೀಫ್‌ಪೀರಾ ತೊಲಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರುಗಳನ್ನು ಸತ್ಕರಿಸಲಾಯಿತು. ಬೆಳಗಾವಿಯ ಮುಜಮಿಲ್ ಹಾಗೂ ರಫೀಕ್ ಅವರಿಂದ ಕವ್ವಾಲಿ ಗಾಯನ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net