

ಕಾಗವಾಡ: ಕಾರ್ಖಾನೆ ಮಾಲೀಕರು ರೈತರನ್ನು ಲೂಟಿ ಮಾಡುತ್ತಿದ್ದಾರೆ. ಕಬ್ಬಿಗೆ ಯೋಗ್ಯ ಬೆಲೆ ಮತ್ತು ತೂಕದಲ್ಲಿನ ಮೋಸ ತಪ್ಪಿಸಲು ರೈತರು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು ಎಂದು ಮಾಜಿ ಸಂಸದ ರಾಜು ಶೆಟ್ಟಿ ಹೇಳಿದರು.
ತಾಲೂಕಿನ ಶಿರಗುಪ್ಪಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರ ಸಭೆಯಲ್ಲಿ ಮಾತನಾಡಿ, ಕಾರ್ಖಾನೆ ಮಾಲೀಕರು ಕಬ್ಬಿಗೆ ಯೋಗ್ಯ ಬೆಲೆ ನೀಡದೆ ರೈತರನ್ನು ವಂಚಿಸುತ್ತಿದ್ದಾರೆ ಎಂದರು.
ರೈತ ಮುಖಂಡ ಸುರೇಶ ಚೌಗುಲೆ ಮಾತನಾಡಿ, ಈ ವರ್ಷ ಕಬ್ಬು ಬೆಳೆ ಕಡಿಮೆ ಇದ್ದು, ಕಾರ್ಖಾನೆಗಳು ಮೂರೇ ತಿಂಗಳಲ್ಲಿ ಕಬ್ಬಿಲ್ಲದೇ ಹಂಗಾಮು ಬಂದು ಮಾಡಲಿವೆ. ಆದ್ದರಿಂದ ರೈತರು ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಲು ಪೈಪೋಟಿ ಮಾಡದೇ ಕಾರ್ಖಾನೆಗಳ ದರ ಘೋಷಣೆಯಾಗುವ ವರೆಗೆ ತಾಳ್ಮೆ ತೋರಬೇಕೆಂದರು.
ರೈತರಾದ ಅಜಿತ್ ಕರವ, ದಾದಾ ಪಾಟೀಲ, ತಮ್ಮಾ ತಮದಡ್ಡಿ, ಅಣ್ಣಾಸಾಹೇಬ ಕಾತ್ರಾಳೆ ಇತರರಿದ್ದರು.