

ಶಿವಮೊಗ್ಗ: ಬ್ರಾಹ್ಮಣರು ನಿತ್ಯ ತಮ್ಮ ವಿಽಗಳನ್ನು ಮಾಡಬೇಕು. ಹಿಂದಿನವರು ಪಾಲಿಸಿದ ಧರ್ಮ ಕರ್ಮಗಳನ್ನು ಮುಂದುವರಿಸಿಕೊAಡು ಬರಬೇಕಿದೆ ಎಂದು ತೀರ್ಥಹಳ್ಳಿ ಬ್ರಾಹ್ಮಣ ಸಂಘದ ಅಧ್ಯಕ್ಷ ಚಂದ್ರಶೇಖರ್ ತುಂಬ್ರಮನೆ ಸಲಹೆ ನೀಡಿದರು.
ತೀರ್ಥಹಳ್ಳಿ ತಾಲೂಕಿನ ಕಮ್ಮರಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬುಧವಾರ ತೀರ್ಥಹಳ್ಳಿ ಬ್ರಾಹ್ಮಣ ಸಂಘದ ಉಪ ಶಾಖೆ ಕಮ್ಮರಡಿ ಬ್ರಾಹ್ಮಣ ಸಂಘಟನಾ ಸಮಿತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಎಂಬುದು ಕೇವಲ ತೋರಿಕೆಗೆ ಸೀಮಿತವಾಗುತ್ತಿದೆ. ಪೂರ್ವಜರು ಹಾಕಿಕೊಟ್ಟ ಮಾರ್ಗಗಳನ್ನು ಮರೆಯುತ್ತಿದ್ದೇವೆ. ಆ ಕೆಲಸ ಆಗಬಾರದು ಎಂದರು.
ಎನ್‌ಇಎಸ್ ಅಧ್ಯಕ್ಷ ಜಿ.ನಾರಾಯಣರಾವ್ ಹಾಗೂ ವೈಷ್ಣವಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ರೇವತಿ ಅನಂತಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕಮ್ಮರಡಿ ಬ್ರಾಹ್ಮಣ ಸಂಘಟನಾ ಸಮಿತಿ ಅಧ್ಯಕ್ಷೆ ಲಕ್ಷಿ÷್ಮÃ ಶ್ರೀಕಂಠ ಭಟ್, ಸಂಘಟನಾ ಸಮಿತಿ ಸದಸ್ಯ ಶ್ರೀವತ್ಸ ಭಟ್, ಮುಖಂಡರಾದ ದಿನೇಶ್ ಭಟ್, ಸುಂದರೇಶ್ ಭಟ್, ಕೆ.ಎಸ್.ಶಿವಕುಮಾರ್, ಲತಾ ಶೇಷಾದ್ರಿ ಉಪಸ್ಥಿತರಿದ್ದರು.