

ಬೆಳಗಾವಿ: ಭಗೀರಥ ಮಹರ್ಷಿ ಕಠಿಣ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡು ಗಂಗೆಯನ್ನು ಭೂಮಿಗೆ ತಂದು ಸಕಲಜೀವಿಗಳಿಗೆ ಬದುಕಲು ಸಹಾಯ ಮಾಡಿದವರು. ಹಠದಿಂದ ಅಸಾಧ್ಯವಾದುದನ್ನೂ ಸಾಧಿಸುವುದು ಭಗೀರಥ ಸಾಧನೆ ಎಂದು ವಕೀಲ ಮಲ್ಲಿಕಾರ್ಜುನ ಚೌಕಾಶಿ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರಲ್ಲಿರ ಶನಿವಾರ ಹಮ್ಮಿಕೊಂಡಿದ್ದ ಭಗೀರಥ ಜಯಂತಿ ಉತ್ಸವದಲ್ಲಿ ಮಾತನಾಡಿದ ಅವರು, ಸಂವಿಧಾನದ ಮೂಲ ಪ್ರತಿಯಲ್ಲಿ ಭಗೀರಥರ ಭಾವಚಿತ್ರವಿದೆ. ಅವರ ಬಗ್ಗೆ ತಿಳಿದುಕೊಂಡು ಅವರು ತೋರಿಸಿದ ದಾರಿಯಲ್ಲಿ ಜನರು ನಡೆಯಬೇಕು ಎಂದರು.
ಇದಕ್ಕೂ ಮುಂಚೆ ಸಂಸದ ಜಗದೀಶ ಶೆಟ್ಟರ್ ಅವರು ನಗರದ ಕೋಟೆ ಕೆರೆ ಆವರಣದಲ್ಲಿ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಾರ್ಗವಾಗಿ ಕುಮಾರ ಗಂಧರ್ವ ಕಲಾ ಮಂದಿರದವರೆಗೆ ಸಾಗಿತು.
ಮಧುರೆ ಭಗೀರಥ ಮಹರ್ಷಿ ಗುರುಪೀಠದ ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಕನ್ನಡ ಮತ್ತು ಸಂಸತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಉಪ ಮೇಯರ್ ವಾಣಿ ಜೋಶಿ, ಮಾರ್ಕೇಟ್ ಪೊಲೀಸ್ ಠಾಣೆ ವೃತ್ತ ನಿರೀಕ ಮಹಾಂತೇಶ ದ್ಯಾಮಣ್ಣವರ, ಮುಖಂಡರಾದ ರವಿ ಉಪ್ಪಾರ, ಬಸವರಾಜ ಆಯಟ್ಟಿ, ಕುಶಾಲ ಗುಡೆನ್ನವರ, ಶಿವಪುತ್ರಪ್ಪ ಜಕಬಾಳ, ಜಿ.ಎಸ್.ಉಪ್ಪಾರ, ಉದಯ ಇಡಗಲ, ಅರ್ಜುನ ನಾಯಿಕವಾಡಿ ಇತರರಿದ್ದರು.