ಮಾನ್ವಿ: ಡಾ.ಬಿ.ಆರ್.ಅಂಬೇಡ್ಕರ್ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ಆಂಜನೇಯ ನಸಲಾಪೂರ ಹೇಳಿದರು. ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಬಸಲಿಂಗಮ್ಮ, ಮೌನೇಶ ಅವರ ಮನೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಬಾಸಾಹೇಬರು ಸಂವಿಧಾನದ ಮೂಲಕ ಹಕ್ಕುಗಳನ್ನು ಒದಗಿಸಿದ್ದಾರೆ. ಅದರೆ, ಕಾನೂನು ಬಳಕೆ ಮಾಡುವಲ್ಲಿ ಅಕ್ಷರಸ್ಥರೇ ದಾರಿ ತಪ್ಪುತ್ತಿದ್ದಾರೆ. ಸಮಾಜದಲ್ಲಿದ್ದ ಅಸಮಾನತೆಯನ್ನು ನಿವಾರಿಸಿ ಸ್ವಾತಂತ್ರೃವಾಗಿ ಬದುಕಲು ಅವಕಾಶ ಕಲ್ಪಿಸಿದರು ಎಂದರು. ಗ್ರಾಪಂ ಅಧ್ಯಕ್ಷೆ ಈರಮ್ಮ ಹನುಮಯ್ಯ, ಮಾಜಿ ಅಧ್ಯಕ್ಷ ವೀರೇಶ, ಸದಸ್ಯ ಯಂಕಪ್ಪ ನಕ್ಕುಂದಿ, ಬಹುಜನ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಸಾಹಿತಿ ಹಾಗೂ ಉಪನ್ಯಾಸಕ ಉಮರ್ ದೇವರಮನಿ ನಕ್ಕುಂದಿ, ಗ್ರಂಥಪಾಲಕ ಹನುಮಂತ್ರಾಯ ದೊರೆ ನಕ್ಕುಂದಿ, ಪ್ರಮುಖರಾದ ಮೌನೇಶ ನಕ್ಕುಂದಿ, ಜಗದೀಶ ಸಾಲ್ಮನಿ, ಗಂಗಾಧರ ಹಿಂದಿನಮನೆ, ಯಮುನಪ್ಪ ಜಾಗೀರಪನ್ನೂರು, ಮೌನೇಶ್ ಕೋರಿ, ಶಿವರಾಜ ಮರಾಠ, ಹನುಮಯ್ಯ ಇತರರಿದ್ದರು.