ಏಮ್ಸ್ ಜಾರಿಗೆ ಪಕ್ಷತೀತಾವಾಗಿ ಹೋರಾಟ ಮಾಡೋಣ- ರಾಜೇಶ ಕುಮಾರ

raichur
raichur
Published on

 ರಾಯಚೂರು ಏಮ್ಸ್ ಹೋರಾಟಗಾರರು ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್ ನಡುವಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಂಡು ಜಿಲ್ಲೆಯ ಸರ್ವ ಶಾಸಕರು, ಸಂಸದರು ಒಗ್ಗೂಡಿಕೊಂಡು ಜಿಲ್ಲೆಗೆ ಏಮ್ಸ್ ಜಾರಿಮಾಡಲು ಮುಂದಾಗಬೇಕೆಂದು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ರಾಜೇಶ ಕುಮಾರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಗೆ ಏಮ್ಸ್ ಮಂಜೂರಾತಿ ಮುಖ್ಯವೇ ಹೊರತು ಭಿನ್ನಾಭಿಪ್ರಾಯಗಳಿಂದ ಸಮಸ್ಯೆ ಪರಿಹಾರವಾಗುವದಿಲ್ಲ. ಈ ಹಿಂದೆ ಐಐಟಿಗಾಗಿ ನಡೆದ ಹೋರಾಟ ಐತಿಹಾಸಿಕವಾಗಿದ್ದು ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು. ಅಂದಿನ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿಯೂ ಸಭೆ ನಡೆಸಿ ಐಐಟಿ ಕೈತಪ್ಪಿರುವ ಹಿನ್ನಲೆಯಲ್ಲಿ ಏಮ್ಸ್ ನೀಡುವದಾಗಿ ಭರವಸೆ ನೀಡಲಾಗಿತ್ತು. ಆದರೆ ಈ ಭಾಗಕ್ಕೆ ಏಮ್ಸ್ ಮಂಜೂರಾತಿ ಅವಶ್ಯಕತೆಯಿದೆ. ಬಿಜೆಪಿ ಸರ್ಕಾರ ಹೈದ್ರಬಾದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವಾಗಿ ಹೆಸರು ಬದಲಿಸಿತೆ ಹೊರತು ಡಬಲ್ ಇಂಜಿನ್ ಸರ್ಕಾರ ವಿದ್ದರೂ ಏಮ್ಸ್ ಮಂಜೂರಾತಿ ಭರವಸೆ ನೀಡಲಿಲ್ಲ.

ಕೇವಲ ಹೆಸರು ಬದಲಾವಣೆಯಿಂದ ಕಲ್ಯಾಣವಾಗಲಿಲ್ಲ. ಕೂಡಲೇ ಹೆಸರು ರದ್ದುಗೊಳಿಸಿ ಹೈದ್ರಬಾದ ಕರ್ನಾಟಕವೆಂದು ಕರೆಯಬೇಕೆಂದರುಅಕ್ರೋಶ ವ್ಯಕ್ಯಪಡಿಸಿದರು.

ಏಮ್ಸ್ ಹೋರಾಟಗಾರು ತಾಳ್ಮೆ ಕಳೆದುಕೊಂಡು ಮಾತನಾಡಬಾರದು, ಶಾಸಕರು ಪ್ರತಿಯಾಗಿ ಶಕ್ತಿಪ್ರದರ್ಶನ ನಡೆಸುವದು ಅವಶ್ಯಕತೆಯಿಲ್ಲ. ಏಮ್ಸ್ ಹೋರಾಟ ದಿಕ್ಕು ತಪ್ಪದಂತೆ ಸಂಘಟಿತ ಹೋರಾಟಕ್ಕೆ ಎಲ್ಲರು ಕೈ ಜೋಡಿಸಬೇಕು. ಆದರಿಂದ ಏಮ್ಸ್ ಹೋರಾಟಗಾರರ ಮೇಲಿನ ಪ್ರಕರಣವನ್ನು ಹಿಂಪಡೆದು ಪಕ್ಷತೀತವಾಗಿ ಹೋರಾಟ ಮಾಡಿ ಏಮ್ಸ್ ಜಾರಿ ಮಾಡಿಸೋಣವೆಂದರು.

ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಮಾಸೂಮ್, ಸಾಧಿಕ್ ಯರಗೇರಾ, ಲಕ್ಷ್ಮಣ ಕಲ್ಲೂರು, ಪ್ರಭುರಾಜ, ಗಂಗಾಧರ, ಪೇಪರ ಚಂದ್ರು, ನರಸಿಂಹಲು, ತಾಯಣ್ಣ ಗಧಾರ, ಭೀಮಣ್ಣ ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net