

ಚಿಕ್ಕೋಡಿ: ನಾಡಹಬ್ಬಕ್ಕೆ ಐತಿಹಾಸಿಕ ಹಾಗೂ ಪೂಜ್ಯನೀಯ ಸ್ಥಾನಮಾನವಿದೆ. ಆದ್ದರಿಂದ ದಸರಾವನ್ನು ಪ್ರತಿಯೊಬ್ಬ ಕನ್ನಡಿಗ ಅಭಿಮಾನದಿಂದ ಆಚರಿಸಿ ಭಾಷೆ, ಸಂಸ್ಕೃತಿಯ ಕೀರ್ತಿ ಹೆಚ್ಚಿಸಬೇಕು ಎಂದು ಪ್ರಾರ್ಚಾಯ ಆನಂದ ಕೋಳಿ ಹೇಳಿದರು.
ತಾಲೂಕಿನ ಧುಳಗಣವಾಡಿ ಗ್ರಾಮದ ದುರ್ಗಾದೇವಿ ಮಂದಿರದಲ್ಲಿ ರಂಗದರ್ಶನ ಗ್ರಾಮೀಣ ವಿಕಾಸ ಸಂಘ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ನಾಡಹಬ್ಬ ದಸರಾ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಗ್ರಾಪಂ ಸದಸ್ಯ ಶಿವಕುಮಾರ ಕಮತೆ, ಖಡಕಲಾಟ ಅಪ್ಪನವರ ಕುಮಾರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಮಾತನಾಡಿದರು.
ಚನ್ನಮಲ್ಲಯ್ಯ ಮಠಪತಿ, ಗ್ರಾಪಂ ಸದಸ್ಯೆ ಮಾಲಾಶ್ರೀ ಖೋತ, ಸೂರಜ ಸನದಿ, ಪಿಕೆಪಿಎಸ್ ಉಪಾಧ್ಯಕ್ಷ ಕಾಕಾಸಾಹೇಬ ಚಿಮಣೆ, ಮಾರುತಿ ಕಾಮಗೌಡ ಇತರರಿದ್ದರು. ಭರತ ಕಲಾಚಂದ್ರ ಪ್ರಾಸ್ತಾವಿಕ ಮಾತನಾಡಿದರು. ಸುಪ್ರಿಯಾ ಕಲಾಚಂದ್ರ ಸ್ವಾಗತಿಸಿದರು. ಸುಜಾತಾ ಮಗದುಮ್ಮ ನಿರೂಪಿಸಿದರು.