

ಸಂಕೇಶ್ವರ: ಭವಿಷ್ಯದ ಬದಲಾವಣೆಗಳಿಗೆ ತಕ್ಕ ವಾತಾವರಣ ನಿರ್ಮಾಣವೇ ತಂತ್ರಜ್ಞಾನದ ಮೂಲಗುರಿಯಾಗಿದ್ದು, ಆವಿಷ್ಕಾರಗಳ ಮೂಲಕ ಅಭಿವೃದ್ಧಿ ವೇಗ ಹೆಚ್ಚಿಸುವ ಕಾರ್ಯ ಸಂಶೋಧಕರಿಂದಾಗಬೇಕಿದೆ ಎಂದು ಸಂಜಯ ಗೋಡಾವತ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ವೆಂಕಟೇಶ ರಾಯ್ಕರ ಹೇಳಿದರು.
ಸಮೀಪದ ನಿಡಸೋಸಿಯ ಎಸ್‌ಜೆಪಿಎನ್ ಟ್ರಸ್ಟಿನ ಹಿರಾಶುಗರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಟ್ಟದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚಿನ ಪ್ರವೃತ್ತಿಗಳು ವಿಷಯದ ಸಮ್ಮೇಳನದಲ್ಲಿ ಮಾತನಾಡಿದರು. ಇತ್ತೀಚಿನ ತಂತ್ರಜ್ಞಾನಗಳ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಪುಣೆಯ ಡೆಲಾಯಿಟ್ ಸಂಸ್ಥೆಯ ನಿರ್ದೇಶಕ ವಿಜಯ ಮಾಂಗೇಶ್ಕರ ಮಾತನಾಡಿ, ತಂತ್ರಜ್ಞಾನಗಳು ಸಾರ್ವಜನಿಕರಿಗೆ ಸದುಪಯೋಗವಾಗಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಸಿ.ಕಮತೆ, ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಮಲೇಶಿಯಾದ ಮಹಸಾ ವಿಶ್ವವಿದ್ಯಾಲಯದ ಡಾ.ರಸಿಮಲ್ ಹಖ್ ಮಾತನಾಡಿದರು. ಸಂಶೋಧನಾತ್ಮಕ ಸ್ಮರಣ ಸಂಚಿಕೆ ಗಣ್ಯರಿಂದ ಬಿಡುಗಡೆ ಮಾಡಲಾಯಿತು.
60 ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡಿಸಿದರು. ಕಾನ್ಫರೆನ್ಸ್ ವರ್ಡ್ ಸಿಇಒ ರೇಷ್ಮಾ ಗುಪ್ತಾ, ಪ್ರೊ. ಮಹೇಶ ಹಿಪ್ಪರಗಿ, ಸಂಚಾಲಕರಾದ ಡಾ. ಎಸ್.ಎನ್. ಟೋಪನ್ನವರ, ಡಾ.ಕೆ.ಎಂ. ಅಕ್ಕೋಳಿ, ಡಾ. ಮಹೇಶ ಯನಗಿಮಠ, ಪ್ರೊ. ಬಿ.ಪಿ. ಖೋತ ಇತರರಿದ್ದರು.