ಒಗ್ಗಟ್ಟಿನಿಂದ ಉದ್ಯಮದಲ್ಲಿ ತೊಡಗಲಿ

13Ndr1
Published on

ನಂದೇಶ್ವರ: ಮಹಿಳೆಯರು ಒಗ್ಗಟ್ಟಿನಿಂದ ವ್ಯಾಪಾರ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಬೆಳವಣಿಗೆಗೆ ಅಗತ್ಯವಿರುವ ಎಲ್ಲ ಸೌಲಭ್ಯ ಮತ್ತು ತರಬೇತಿಯನ್ನು ಸರ್ಕಾರದ ಸಹಭಾಗಿತ್ವದಲ್ಲಿ ಸಹಕಾರ ನೀಡುವುದಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಹೇಳಿದರು.

ಸಮೀಪದ ರಡ್ಡೇರಹಟ್ಟಿ ಗ್ರಾಮದಲ್ಲಿ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಪಂ ಇವುಗಳ ಅಡಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಥಣಿ ತಾಲೂಕು ಸಂಜೀವಿನಿ ಮಹಿಳಾ ಕಿಸಾನ್ ಉದ್ಯಮಶೀಲತಾ ಸಮೂಹದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳಾ ಒಕ್ಕೂಟಗಳು ಅಭಿವೃದ್ಧಿ ಪಥದಲ್ಲಿ ಸಾಗಲು ಎಲ್ಲ ಸದಸ್ಯರ ಸಹಕಾರ ಮುಖ್ಯವಾಗಿದೆ ಎಂದರು.

ಸಂಜೀವಿನಿ ಮಹಿಳಾ ಕಿಸಾನ್ ಸಮೂಹದ ತಾಲೂಕು ಮೇಲ್ವಿಚಾರಕಿ ದಾಕ್ಷಾಯಣಿ ಬಿಸ್ವಾಗರ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಸುವರ್ಣಾ ಮಡಿವಾಳ, ಸಂಜೀವಿನಿ ಕಿಸಾನ್ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮುರಿಗೆವ್ವ ಘಡಲೋಟಿ, ಪಿಡಿಒ ಈರಪ್ಪ ತಮದಡ್ಡಿ, ರಾಮಚಂದ್ರ ನಾಯಕ, ಸಿದ್ಧಾರೂಢ, ಟಿ.ಎನ್.ಕೋಳಿ, ಚಂದ್ರಶೇಖರ ರತ್ನಾಕರ, ಪ್ರಕಾಶ ನಂದೇಶ್ವರ, ಆನಂದ ವಂಟಗೋಡೆ, ಬಾಳೇಶ ವಾಗಮೋಡೆ, ಕಾವೇರಿ ಮಾಳಿ, ಮಹಮ್ಮದ್ ಮುಲ್ಲಾ, ಮಹೇಶ ಗಸ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net