ರಕ್ತದಾನಕ್ಕೆ ಮುಂದಾಗಲಿ

25Ryabaga1
Published on

ರಾಯಬಾಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಅನೇಕ ಯೋಜನೆ ಜಾರಿಗೆ ತರುವ ಮೂಲಕ ದೇಶ ಪ್ರಗತಿಯತ್ತ ಕೊಂಡೊಯ್ಯುತ್ತಿದ್ದರೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದ ದತ್ತ ಮಂದಿರದ ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷದ ರಾಯಬಾಗ ಮಂಡಲ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ೭೫ನೇ ಜನ್ಮದಿನದ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಮೂಲಕ ದೇಶದ ಜನರ ಜೀವನ ಶೈಲಿ ಬದಲಿಸಿದ್ದಾರೆ. ಪ್ರತಿಯೊಬ್ಬರು ರಕ್ತದಾನಕ್ಕೆ ಮುಂದಾಗಬೇಕು ಎಂದರು.

ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಬಸವರಾಜ ದೋಣವಾಡೆ, ಸದಾಶಿವ ಘೋರ್ಪಡೆ, ಸದಾನಂದ ಹಳಿಂಗಳಿ, ಶಿವಾನಂದ ಐಹೊಳೆ, ಮಹೇಶ ಕರಮಡಿ, ಅನಿಲ ಹಂಜೆ, ಅಮೃತ ಕುಲಕರ್ಣಿ, ವಿಜಯ ಆಕಳೆ, ರಮಜಾನ್ ಮಂಕಾನದಾರ, ಕಲ್ಲಪ್ಪ ಸನದಿ, ಸಂಜಯ ಮೈಶಾಳೆ, ವೀರೇಂದ್ರ ಬ್ಯಾಕೂಡ, ಮಾರುತಿ ಬಂತೆ, ಕರೆಪ್ಪ ಪೂಜೇರಿ, ಗೋಪಾಲ ಕೋಚೆರಿ, ಸುನೀಲ ಶಿಂಧೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net