

ವಿಜಯಪುರ: ವಿದ್ಯಾರ್ಥಿ ಜೀವನದಲ್ಲಿ ಬರುವ ಹಲವು ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಅವುಗಳನ್ನು ಸವಾಲಾಗಿ ಸ್ವೀಕರಿಸಿ ಉತ್ತಮ ಸಾಧನೆ ಮಾಡಬೇಕೆಂದು ಯುಪಿಎಸ್ಸಿ ಪರೀೆ ಟಾಪರ್ ಡಾ. ಮಹೇಶ ಮಡಿವಾಳರ ಹೇಳಿದರು.
ನಗರದ ವಿದ್ಯಾವರ್ಧಕ ಸಂದ ವಿ.ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ವೈದ್ಯಕಿಯ ದಿನಾಚರಣೆ ಅಂಗವಾಗಿ ಮಂಗಳವಾರ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಕಠಿಣ, ಪ್ರಾಮಾಣಿಕತೆ, ಛಲ ಹಾಗೂ ಗುರುಗಳ ಮೇಲೆ ವಿಶ್ವಾಸ ನಿರಂತರ ಪರೀೆ ಎದುರಿಸುವ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಎಂತಹ ಕಷ್ಟ ಬಂದರೂ ಎದೆ ಗುಂದದೆ ಸಾಧಿಸಬೇಕೆಂಬ ಛಲದೊಂದಿಗೆ ಗುರಿ ಮುಟ್ಟುವವರೆಗೆ ತಮ್ಮ ಪ್ರಯತ್ನ ನಿರಂತರವಾಗಿರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉಪನ್ಯಾಸಕ ಎಸ್.ಎಸ್. ಗೌರಿ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಶಿಷ್ಯ ಡಾ. ಮಹೇಶ ಮಡಿವಾಳ ಅವರ ವಿದ್ಯಾರ್ಥಿ ಜೀವನದ ಕುರಿತು ಮಾತನಾಡಿ, ಸಾಧನೆಯ ಹಸಿವು ಇರುವವರಿಗೆ ಯಾವ ಅಡೆ ತಡೆಯೂ ಬಾಧಿಸುವುದಿಲ್ಲ ಎಂದರು.
ವಿದ್ಯಾವರ್ಧಕ ಸಂದ ಆಡಳಿತ ಮಂಡಳಿ ಸದಸ್ಯ ವಿಕಾಸ ದರಬಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಮಹೇಶ ಮಡಿವಾಳ ಅವರಂತಹ ಉತ್ತಮ ಸಾಧಕರೊಂದಿಗೆ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಬಹಳ ಅತ್ಯುಪಯುಕ್ತ. ವಿದ್ಯಾರ್ಥಿಗಳ ಮುಂದಿನ ಜೀವನದಲ್ಲಿ ಇವರಂತೆ ಉತ್ತಮ ಸಾಧನೆಗೈಯುವ ಜತೆಗೆ ಸಂಸ್ಥೆ ಹಾಗೂ ಪಾಲಕರಿಗೆ ನಾಡಿಗೆ ದೊಡ್ಡ ಕೊಡುಗೆ ನೀಡಬೇಕೆಂದು ಕರೆ ನೀಡಿದರು.
ಪ್ರಾಚಾರ್ಯ ಟಿ.ಆರ್. ಕುಲಕರ್ಣಿ ಸ್ವಾಗತಿಸಿದರು. ಎಂ.ಎಸ್. ಬಿರಾದಾರ ವಂದಿಸಿದರು. ಉಪನ್ಯಾಸಕ ಪಿ.ಜಿ. ಜೋಶಿ, ಆರ್.ಜಿ. ದರಬಾರ ಮತ್ತಿತರರಿದ್ದರು.