ವಲಸಿಗರ ಹಾವಳಿಗೆ ಕಡಿವಾಣ ಬೀಳಲಿ

30 10 2025_BGR_RURAL-PAGE_03 NEW
ದೊಡ್ಡಬಳ್ಳಾಪುರದ ಕರವೇ (ಪ್ರವಿಣ್​ ಕುಮಾರ್​ ಶೆಟ್ಟಿ)ದಿಂದ ವಲಸಿಗರ ಹಾವಳಿಗೆ ಕಡಿವಾಣ ಹಾಕುವಂತೆ ಡಿವೈಎಸ್ಪಿ ರವಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಎಸ್​ಎಲ್​ಎನ್​.ವೇಣು, ಉಪಾಧ್ಯಕ್ಷ ಜೋಗಳ್ಳಿ ಅಮ್ಮು ಖಜಾಂಚಿ ಆನಂದ್​, ನಗರದ ಅಧ್ಯಕ್ಷ ಶ್ರೀ ನಗರ ಬಶೀರ್​, ಉಪಾಧ್ಯಕ್ಷ ಮಂಜುನಾಥ್​, ಶ್ರೀನಿವಾಸ್​, ಹಮಾಮ್​ ಮಂಜುನಾಥ್​ ರಮೇಶ್​ ಇದ್ದರು.
Published on

ದೊಡ್ಡಬಳ್ಳಾಪುರ : ತಾಲೂಕಿನಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರು ಸೇರಿ ಇತರೆ ರಾಜ್ಯಗಳ ವಲಸಿಗರನ್ನು ಪತ್ತೆ ಹಚ್ಚಿ ಅವರ ಹಾವಳಿ ತಪ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್​ ಕುಮಾರ್​ ಶೆಟ್ಟಿ) ಬಣದ ಕಾರ್ಯಕರ್ತರು ಡಿವೈಎಸ್ಪಿ ರವಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಕರವೇ ತಾಲೂಕು ಅಧ್ಯಕ್ಷ ಹಮಾಮ್​ ವೆಂಕಟೇಶ್​ ಮಾತನಾಡಿ, ತಾಲೂಕು ಬೆಂಗಳೂರಿಗೆ ಹೊಂದಿಕೊಂಡಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೇವಲ 20 ಕಿ.ಮೀ ದೂರದಲ್ಲಿದೆ. ತಾಲೂಕಿನಲ್ಲಿ ಜವಳಿ ಪಾರ್ಕ್​, ಹಲವು ಕೈಗಾರಿಕೆಗಳು ಇದ್ದು, ನೂತನವಾಗಿ ಫಾಕ್ಸ್​ಕಾನ್​ ಕಂಪನಿ ಆರಂಭವಾಗಿ ನಗರವು ವೇಗವಾಗಿ ಬೆಳೆಯುತ್ತಿದೆ. ಉದ್ಯೋಗವನ್ನರಸಿ ಬೇರೆ ಬೇರೆ ರಾಜ್ಯಗಳಿಂದ ಲಕ್ಷಾಂತರ ಜನ ದೊಡ್ಡಬಳ್ಳಾಪುರ ವ್ಯಾಪ್ತಿಗೆ ಬರುತ್ತಿದ್ದು, ಇವರು ಹೊರ ರಾಜ್ಯದವರೋ, ಇಲ್ಲ ಬಾಂಗ್ಲಾದಿಂದ ಅಕ್ರಮವಾಗಿ ಬರುತ್ತಿದ್ದಾರೋ ಎಂದು ತಿಳಿಯುತ್ತಿಲ್ಲ. ಅಲ್ಲದೆ ಇತರೆ ರಾಜ್ಯದ ವಲಸಿಗರ ಸಂಖ್ಯೆ ಹೆಚ್ಚಾಗಿ ಕಳ್ಳತನ, ದರೋಡೆ, ಬೆದರಿಕೆ ಒಡ್ಡುವುದು ನಡೆಯುತ್ತಿದೆ. ಈ ಕುರಿತು ಪೊಲೀಸ್​ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net