

ತೆಲಸಂಗ: ಗ್ರಂಥಾಲಯ ಭವಿಷ್ಯ ರೂಪಿಸುವ ಜ್ಞಾನಕೇಂದ್ರವಾಗಿದ್ದು, ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಹಿರಿಯರಾದ ನಾನಾಗೌಡ ಪಾಟೀಲ ಹೇಳಿದರು.
ಸಮೀಪದ ಕನ್ನಾಳ ಗ್ರಾಮದಲ್ಲಿ ಗ್ರಾಮಸ್ಥರು ಸಂಗ್ರಹಿಸಿದ 2 ಲಕ್ಷ ರೂ. ಹಾಗೂ ಗ್ರಾಮ ಪಂಚಾಯಿತಿಯ 10 ಲಕ್ಷ ರೂ. ವೆಚ್ಚದ ಹೈಟೆಕ್ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗ್ರಾಮದಲ್ಲಿ ಹೈಟೆಕ್ ಗ್ರಂಥಾಲಯ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಶೇಖರ ವಳಸಂಗ ಮಾತನಾಡಿ, ಪ್ರತಿಯೊಬ್ಬರೂ ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಪಿಡಿಒ ವೈಶಾಲಿ ಅನಂತಪುರ, ಗ್ರಾಪಂ ಸದಸ್ಯ ಅಪ್ಪಾಸಾಹೇಬ ಇಸರಗೊಂಡ, ಸಂಜೀವ ಅಸ್ಕಿ, ಮಾಳಪ್ಪ ದಳವಾಯಿ, ಪಿಡಿಒ ವೈಶಾಲಿ ಅನಂತಪುರ, ಕಾರ್ಯದರ್ಶಿ ಎಂ.ಐ.ನದಾಫ್, ಬಸವರಾಜ, ಕೆಂಚಪ್ಪ, ಮಹಾದೇವ ಪ್ರಕಾಶ ಇಸರಗೊಂಡ ಇತರರಿದ್ದರು.