

ನಿಪ್ಪಾಣಿ: ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಜತೆಗೆ ಮಾನವೀಯ ಮೌಲ್ಯಗಳನ್ನು ಅರ್ಥೈಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಬೆಳಗಾವಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಆರ್.ಪಾಟೀಲ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ‘ಹಿಂದಿನಿಂದ ಇಂದಿನವರೆಗೆ’ ಐತಿಹಾಸಿಕ ಘಟನೆಗಳನ್ನು ಅರ್ಥಮಾಡಿಕೊಳ್ಳುವುದು, ರಾಜಕೀಯ ಮತ್ತು ಆರ್ಥಿಕ ಸನ್ನಿವೇಶದಲ್ಲಿನ ಬದಲಾವಣೆಗಳು ಎಂಬ ವಿಷಯದ ಕುರಿತು ಈಚೆಗೆ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿ, ವಿಚಾರ ಸಂಕಿರಣವು ವಿದ್ಯಾರ್ಥಿಗಳ ಬುದ್ಧಿವಂತಿಕೆ ಮತ್ತು ಅಧ್ಯಯನ ಪರಿಕಲ್ಪನೆಯ ಅರಿವು ಮೂಡಿಸುತ್ತದೆ ಎಂದರು.
ಪ್ರಾಚಾರ್ಯ ಡಾ.ಎಂ.ಎಂ.ಹುರಳಿ ಮಾತನಾಡಿದರು. ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಮಹೇಶ ಬಾಗೇವಾಡಿ ಉದ್ಘಾಟಿಸಿದರು.
ವಿವಿಧ ಮಹಾವಿದ್ಯಾಲಯಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇತಿಹಾಸ, ಅರ್ಥಶಾಸ ಮತ್ತು ರಾಜ್ಯಶಾಸ ವಿಭಾಗಗಳಿಂದ 92 ವಿದ್ಯಾರ್ಥಿಗಳು ಪ್ರಬಂಧ ಮಂಡನೆ ಮಾಡಿದರು. ಪ್ರತಿ ವಿಭಾಗದಿಂದ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಬಂಧ ಮಂಡಕರನ್ನು ಆಯ್ಕೆ ಮಾಡಿ, ಪ್ರಮಾಣ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಅರ್ಥಶಾಸ ಪ್ರಾಧ್ಯಾಪಕಿ ಮಧುಶ್ರೀ ಶೇಯಾನ್, ಅರ್ಥಶಾಸ ವಿಭಾಗದ ಪ್ರಾಧ್ಯಾಪಕ ಡಾ.ವಿಶ್ವನಾಥ ಖೋತ್, ನಿವೃತ್ತ ಪ್ರಾಧ್ಯಾಪಕಿ ಡಾ.ಜಯಶ್ರೀ ನಾಗರಳ್ಳಿ ತೀರ್ಪುಗಾರರಾಗಿದ್ದರು. ಐಕ್ಯೂಎಸಿ ಸಂಯೋಜಕ ಡಾ.ಎ.ಎ.ಕಾಂಬಳೆ, ಸಂಘಟನಾ ಕಾರ್ಯದರ್ಶಿ ಎನ್.ಎಸ್.ಬೆಳಗಾಂವಕರ, ಕೆ.ಎನ್.ಶಂಕರಮೂರ್ತಿ ಇತರರಿದ್ದರು. ಶಿವಲಿಂಗ ನಾಯಿಕ ಪ್ರಾರ್ಥಿಸಿದರು. ಸಹಸಂಚಾಲಕ ಬಿ.ಜಿ.ಉಳ್ಳೆಗಡ್ಡಿ ಸ್ವಾಗತಿಸಿದರು. ಸಂಚಾಲಕ ಸುಧೀರ ಕೋಠಿವಾಲೆ, ನಮಿತಾ ನಾಯಿಕ, ಶಕುಂತಲಾ ಮೆಂಗಾನೆ, ಸಂತೋಷ ಘೋರ್ಪಡೆ ಇತರರಿದ್ದರು.