

ಬೆಟಗೇರಿ: ಪ್ರತಿಯೊಬ್ಬರೂ ಸಾಹಿತ್ಯಾಭಿರುಚಿ ಮತ್ತು ಕನ್ನಡಾಭಿಮಾನ ಬೆಳಸಿಕೊಳ್ಳಬೇಕು. ಆನಂದಕಂದರು ಅಪ್ಪಟ ದೇಸಿ ಕವಿ ಮತ್ತು ಕನ್ನಡ ನಾಡಿನ ಶ್ರೇಷ್ಠ ಸಾಹಿತಿಯಾಗಿದ್ದರು ಎಂದು ಸುಣಧೋಳಿ ಶಿವಾನಂದ ಸ್ವಾಮೀಜಿ ಹೇಳಿದರು.
ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಗ್ರಾಮ ಪಂಚಾಯಿತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಯುಕ್ತಾಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬೆಟಗೇರಿ ಕೃಷ್ಣಶರ್ಮರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಬೆಟಗೇರಿ ಕೃಷ್ಣಶರ್ಮರ ಸ್ಮರಣೋತ್ಸವದ ಮೂಲಕ ಇಂದಿನ ಯುವಪೀಳಿಗೆಗೆ ಉತ್ತಮ ಸಂದೇಶ ದೊರೆತಿದೆ. ಸ್ಥಳೀಯರ ಸಹಕಾರ ಪ್ರಮುಖವಾಗಿದೆ ಎಂದು ತಿಳಿಸಿದರು.
ಕರವೇ ಅಧ್ಯಕ್ಷ ಈರಣ್ಣ ಬಳಿಗಾರ ಮಾತನಾಡಿದರು. ಯುವ ಚಿಂತಕ ಅರುಣ ಸವತಿಕಾಯಿ, ಡಾ.ಬೆಟಗೇರಿ ಕೃಷ್ಣಶರ್ಮರ ಬದುಕು ಮತ್ತು ಬರಹದ ಕುರಿತು ಉಪನ್ಯಾಸ ನೀಡಿದರು. ಗಾಯಕರಾದ ದೀಯಾ ಹೆಗಡೆ, ಜ್ಞಾನೇಶ ಹಾಗೂ ಹಾಸ್ಯ ಕಲಾವಿದ ಶರಣು ಯಮನೂರ ಮನರಂಜನೆ ಕಾರ್ಯಕ್ರಮ ನೀಡಿದರು.
ಕಲಾವಿದ ಈಶ್ವರಚಂದ್ರ ಬೆಟಗೇರಿ, ಬಿಇಒಗಳಾದ ಜಿ.ಬಿ.ಬಳಿಗಾರ, ಪಿ.ಬಿ.ಹಿರೇಮಠ, ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಚಂದರಗಿ, ಪಿಕೆಪಿಎಸ್ ಅಧ್ಯಕ್ಷ ಬಸವಂತ ಕೋಣಿ, ಮಹಾದೇವ ಕಂಬಿ, ಬಸವರಾಜ ಪಣದಿ, ಮಂಜು ಪತ್ತಾರ, ವಿಜಯ ಹಿರೇಮಠ, ಮಾಯಪ್ಪ ಕೋಣಿ, ಶಂಭು ಹಿರೇಮಠ, ವೀರಭದ್ರ ದೇಯಣ್ಣವರ, ರಘು ಬೆಟಗೇರಿ, ಮಹಾದೇವ ತಪಸಿ,
ಫಿರೋಜ್ ಮಿರ್ಜಾನಾಯ್ಕ, ಶಿವು ನಾಯ್ಕರ, ಕಾರ್ತಿಕ ತೇರದಾಳ, ಬಸವರಾಜ ದೇಯನ್ನವರ, ಈರಣ್ಣ ದಂಡಿನ ಇತರರಿದ್ದರು.