ಮಾಲಿನ್ಯಮುಕ್ತ ಪರಿಸರ ನಿರ್ಮಿಸೋಣ

ಶ್ರೀನಿವಾಸಪುರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ವೃತ್ತದ ಬಳಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪುರಸಭೆ ಮುಖ್ಯಾಧಿಕಾರಿ ವೈ.ಎನ್​.ಸತ್ಯನಾರಾಯಣ ಪ್ರತಿಜ್ಞಾ ವಿಧಿ ಭೋದಿಸಿದರು. ಪ್ರಧಾನ ಸಿವಿಲ್​ನ್ಯಾಯಾಧೀಶ ಎಚ್​.ಆರ್​. ಸಚಿನ್​, ಪುರಸಭೆ ಉಪಾಧ್ಯಕ್ಷೆ ಸುನೀತಾ, ವ್ಯವಸ್ಥಾಪಕ ನವೀನ್​ಚಂದ್ರ, ಆರೋಗ್ಯ ನಿರೀಕ್ಷಕ ಕೆ.ಜೆ.ರಮೇಶ್​, ಕಂದಾಯ ಅಧಿಕಾರಿ ವಿ.ನಾಗರಾಜ್​ ಇದ್ದರು.
111
ಶ್ರೀನಿವಾಸಪುರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ವೃತ್ತದ ಬಳಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪುರಸಭೆ ಮುಖ್ಯಾಧಿಕಾರಿ ವೈ.ಎನ್​.ಸತ್ಯನಾರಾಯಣ ಪ್ರತಿಜ್ಞಾ ವಿಧಿ ಭೋದಿಸಿದರು. ಪ್ರಧಾನ ಸಿವಿಲ್​ನ್ಯಾಯಾಧೀಶ ಎಚ್​.ಆರ್​. ಸಚಿನ್​, ಪುರಸಭೆ ಉಪಾಧ್ಯಕ್ಷೆ ಸುನೀತಾ, ವ್ಯವಸ್ಥಾಪಕ ನವೀನ್​ಚಂದ್ರ, ಆರೋಗ್ಯ ನಿರೀಕ್ಷಕ ಕೆ.ಜೆ.ರಮೇಶ್​, ಕಂದಾಯ ಅಧಿಕಾರಿ ವಿ.ನಾಗರಾಜ್​ ಇದ್ದರು.
Published on

ಸ್ವಚ್ಛತಾ ಅಭಿಯಾನದಲ್ಲಿ ಪ್ರಧಾನ ಸಿವಿಲ್​ ನ್ಯಾಯಾಧೀಶ ಎಚ್​.ಆರ್​.ಸಚಿನ್​ ಕರೆ



ಶ್ರೀನಿವಾಸಪುರ: ಸ್ವಚ್ಛ ವಿಚಾರ, ಸ್ವಚ್ಛ ಮನೋಭಾವ ಹಾಗೂ ಮಾಲಿನ್ಯಮುಕ್ತ ಪರಿಸರ ನಿರ್ಮಿಸಿಕೊಂಡು ಆರೋಗ್ಯಪೂರ್ಣ ಜೀವನ ನಡೆಸಲು ಮುಂದಾಗಬೇಕು ಎಂದು ಪ್ರಧಾನ ಸಿವಿಲ್​ ನ್ಯಾಯಾಧೀಶ ಎಚ್​.ಆರ್​.ಸಚಿನ್​ ಹೇಳಿದರು.
ಪಟ್ಟಣದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ವೃತ್ತದ ಬಳಿ ಶುಕ್ರವಾರ ಪುರಸಭೆ, ನ್ಯಾಯಾಲಯ, ವಕೀಲರ ಸಂಘ, ಶಿಶು ಅಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಟ್ಟಣವನ್ನು ಪ್ಲಾಸ್ಟಿಕ್​ಮುಕ್ತ
ಮಾಡಲು ಕೇವಲ ಪುರಸಭೆಯಿಂದ ಸಾಧ್ಯವಿಲ್ಲ. ನಾಗರಿಕರು ಕೈಜೋಡಿಸಿದಾಗ ಸ್ವಚ್ಛ ಪಟ್ಟಣವನ್ನಾಗಿ ಮಾಡಬಹುದು. ಮನೆಯಿಂದಲೇ ಹಸಿ&ಒಣ ಕಸವನ್ನು ಬೇರ್ಪಡಿಸಬೇಕು. ಪ್ಲಾಸ್ಟಿಕ್​ ಬಳಸದೆ ಮೊದಲು ಮನೆಯ
ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಂತರ ಸಾರ್ವಜನಿಕ ಸ್ಥಳಗಳಲ್ಲಿ ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಬೇಕು. ಪುರಸಭೆಯೊಂದಿಗೆ ನಾಗರಿಕರು, ಸಂಘ&ಸಂಸ್ಥೆಗಳು ಕೈಜೋಡಿಸಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್​.ಸತ್ಯನಾರಾಯಣ
ಮಾತನಾಡಿ, ಘನ ತ್ಯಾಜ್ಯ ವಿಲೇವಾರಿ ನಿಯಮಗಳು 2016ರಂತೆ ಮನೆಯಲ್ಲಿ ಉತ್ಪತ್ತಿ ಯಾಗುವ ತ್ಯಾಜ್ಯವನ್ನು ಹಸಿ ಕಸ, ಒಣ ಕಸ ಮತ್ತು ಹಾನಿಕಾರಕ ಕಸಗಳನ್ನಾಗಿ ವಿಂಗಡಿಸಿ ತಪ್ಪದೇ ಸ್ಥಳಿಯ ಸಂಸ್ಥೆಗಳ ಕಸ ಸಂಗ್ರಹ ವಾಹನಗಳಿಗೆ ನೀಡಬೇಕು ಎಂದರು.
ಪುರಸಭೆ ಉಪಾಧ್ಯಕ್ಷೆ ಸುನಿತಾ, ವ್ಯವಸ್ಥಾಪಕ ನವೀನ್​ಚಂದ್ರ, ಆರೋಗ್ಯ ನಿರೀಕ್ಷಕ ಕೆ.ಜೆ.ರಮೇಶ್​, ಕಂದಾಯ ಅಧಿಕಾರಿ ವಿ.ನಾಗರಾಜ್​, ಕಂದಾಯ ನಿರೀಕ್ಷಕ ಎನ್​.ಶಂಕರ್​, ವಕೀಲರ ಸಂಘದ ಅಧ್ಯಕ್ಷ ಜಯರಾಮೇಗೌಡ, ಪ್ರಧಾನ ಕಾರ್ಯದರ್ಶಿ ಪಿ.ಸಿ.ನಾರಾಯಣಸ್ವಾಮಿ, ವಕೀಲರಾದ ಶ್ರೀನಿವಾಸಗೌಡ, ಲೋಕೇಶ್​, ಶಂಕರಪ್ಪ,
ಮಂಜುನಾಥರೆಡ್ಡಿ, ವಿನಯಕುಮಾರ್​, ಎಂ.ನಾಗರಾಜ್​, ಭಾರತ್​ ಸ್ಕೌಟ್ಸ್​ ಆಂಡ್​ ಗೈಡ್ಸ್​ ತಾಲೂಕು ಕಾರ್ಯದರ್ಶಿ ಟಿ.ಎನ್​.ರಾಮಕೃಷ್ಣೇಗೌಡ, ಖಜಾಂಚಿ ಜಿ.ವಿ.ಚಂದ್ರಪ್ಪ, ಎಫ್​ಡಿಎ ನಾಗೇಶ್​, ಸಿಬ್ಬಂದಿ ಸಂತೋಷ, ಸುರೇಶ್​, ಗೌತಮ್​, ಶಿವಪ್ರಸಾದ್​, ಪೌರಕಾರ್ಮಿಕರ
ಅಧ್ಯಕ್ಷ ಬಾಲಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net