ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಿ

6-SVR-1
Published on

ಸವಣೂರ: ಪರಿಸರ ಕಾಪಾಡಲು ಮುಂದಾಲೋಚನೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ. ಪ್ರತಿಯೊಬ್ಬರೂ ಕಾಳಜಿ ವಹಿಸಿದರೆ ಮಾತ್ರ ಶುದ್ಧ ಪರಿಸರ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಅಕ್ಕನ ಬಳಗದ ಅಧ್ಯಕ್ಷೆ ವಿದ್ಯಾ ಹಾವಣಗಿ ತಿಳಿಸಿದರು.

ಅಕ್ಕನ ಬಳಗದ ವತಿಯಿಂದ ಪಟ್ಟಣದ ಜಲ್ಲಾಪೂರ ವೃತ್ತದ ಹತ್ತಿರದಲ್ಲಿರುವ ಸನ್‌ರೈಸ್ ಇಂಗ್ಲಿಷ್ ಮಿಡಿಯಂ ಸ್ಕೂಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಕ್ಕನ ಬಳಗದ ಸಂಸ್ಥಾಪಕ ಹಿರಿಯ ಸದಸ್ಯ ಅನಸೂಯಾ ಹಾವಣಗಿ ಅವರು ಸಸಿ ನೆಟ್ಟು ನೀರುಣಿಸಿ, ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲೆ ಪ್ರಭಾರ ಮುಖ್ಯಗುರು ಶಿಲ್ಪಾ ತೆಲಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಕ್ಕನ ಬಳಗದ ಪದಾಧಿಕಾರಿಗಳು, ಸದಸ್ಯರು ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಸಸಿ ನೆಟ್ಟರು.

ಅಕ್ಕನ ಬಳಗದ ಜಯಲಕ್ಷ್ಮೀ ತೆಗ್ಗಿಹಳ್ಳಿ, ಲೀಲಾವತಿ ಗಾಣಗೇರ, ಲಲಿತಾ ಮೆಣಸಿನಕಾಯಿ, ಶಾರದಾ ನಾರಾಯಣಪೂರ, ಚೈತ್ರಾ ಹಾಲಗಿ, ಈರಮ್ಮ ಗಡೆಪ್ಪನವರ, ಕುಸಮಾ ತೆಗ್ಗಿಹಳ್ಳಿ ಇತರರು ಪಾಲ್ಗೊಂಡಿದ್ದರು. ಶಾಲೆಯ ವಿವಿಧ ವಿದ್ಯಾರ್ಥಿಗಳು ಪರಿಸರ ದಿನಾಚರಣೆ ಕುರಿತು ಮಾತನಾಡಿದರು. ಪುಷ್ಪಾ ಬತ್ತಿ ಹಾಗೂ ಪೂರ್ಣಿಮಾ ಬೆಣ್ಣಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net