

ರಾಯಬಾಗ: ಕುಟುಂಬದ ಆಧಾರಸ್ತಂಭವಾಗಿ ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕವಾಗಿ ಬೆಳೆಯಲು ಮಹಿಳೆಯರಿಗೆ ಪ್ರತಿಯೊಬ್ಬರೂ ಅವಕಾಶ ಕಲ್ಪಿಸಬೇಕೆಂದು ಎಸ್‌ಪಿಎಂ ಕಾರ್ಯದರ್ಶಿ ಎಸ್.ಎಸ್.ಸಿಂಗಾಡಿ ಹೇಳಿದರು.
ರಾಯಬಾಗ ಗ್ರಾಪಂ ವ್ಯಾಪ್ತಿಯ ದತ್ತು ಗ್ರಾಮವಾದ ಶಾಹುಪಾರ್ಕ್‌ನಲ್ಲಿ ಎಸ್‌ಪಿಎಂ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರ ಸಬಲೀಕರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆ ಜಾರಿಗೆ ತಂದಿದ್ದು. ಅವುಗಳ ಉಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.
ಎಸ್‌ಪಿಎಂ ನಿರ್ದೇಶಕಿ ಭಾಗ್ಯಶ್ರೀ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಎಸ್.ಎಸ್. ಕುರಬೇಟಿ, ಯೋಜನಾ ಕಾರ್ಯಕ್ರಮಾಧಿಕಾರಿ ಪ್ರೊ.ಪಿ.ಆರ್. ಸವದತ್ತಿ, ಉಪನ್ಯಾಸಕರಾದ ಎಸ್.ಎಂ. ಲೈನದಾರ, ಐ.ಆರ್, ಪತ್ತಾರ, ಎಂ.ಆರ್, ಕಠಾರಿ, ರಾಮು ಕಾಕಡೆ, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು. ವಿನೋದ ಧುಮಾಳೆ ಸ್ವಾಗತಿಸಿದರು. ತ್ರಿವೇಣಿ ಮೊಪಗಾರ ನಿರೂಪಿಸಿದರು, ರಿಹಾನಾ ನದ್ಾ ವಂದಿಸಿದರು.