ಅಭಿವೃದ್ಧಿ ಪರಿಗಣಿಸಿ ಪ್ರತಾಪ್‌ಗೆ ಟಿಕೆಟ್ ನೀಡಲಿ

12Kush03
ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡುವಂತೆ ಕುಶಾಲನಗರದಲ್ಲಿ ಬಿಜೆಪಿ ಕಾರ್ಯಕರ್ತರು ಒತ್ತಾಯಿಸುತ್ತಿರುವುದು. ಎಂ.ಡಿ.ಕೃಷ್ಣಪ್ಪ, ಸುಮನ್‌ಗೌಡ, ಪುಷ್ಪಾ ನಾಗೇಶ್, ಇಂದಿರಾ ರಮೇಶ್, ಬಿ.ಅಮೃತ್‌ರಾಜ್ ಇದ್ದರು.
Published on

ಕುಶಾಲನಗರ: ಸಂಸದ ಪ್ರತಾಪ್ ಸಿಂಹ ಹತ್ತು ವರ್ಷಗಳ ತಮ್ಮ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು, ಇದನ್ನು ಪರಿಗಣಿಸಿ 3ನೇ ಅವಧಿಗೂ ಅವರಿಗೆ ಟಿಕೆಟ್ ನೀಡಬೇಕೆಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.

ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಂಗಳವಾರ ಜಮಾಯಿಸಿದ ಪಕ್ಷದ ಕಾರ್ಯಕರ್ತರು, ಸಂಸದರ ಪರ ಜೈಕಾರ ಮೊಳಗಿಸುವ ಮೂಲಕ ಬೆಂಬಲ ಸೂಚಿಸಿದರು.

ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಮಾತನಾಡಿ, ಸಾಮಾನ್ಯ ಕಾರ್ಯಕರ್ತನಿಗೂ ಪ್ರತಾಪ್ ಸಿಂಹ ಸಿಗುತ್ತಿದ್ದರು. ಕೊಡಗು-ಮೈಸೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದ್ದು, ಸಿಂಹ ಅವರಿಗೆ ದೂರದೃಷ್ಟಿ ಇತ್ತು. ಹಿಂದುಗಳ ಫೈರ್ ಬ್ರಾೃಂಡ್ ಎಂದೇ ಕರೆಯಲ್ಪಡುವ ಪ್ರತಾಪ್‌ಗೆ ಬಿಜೆಪಿ ಹೈಕಮಾಂಡ್ 3ನೇ ಅವಧಿಗೂ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿದರು.

ಯುವ ಮೋರ್ಚಾ ಸದಸ್ಯ ಪ್ರಶಾಂತ್ ಮಾತನಾಡಿ, ನಾನೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ, ಸಂಸದರ ನಿಧಿಯನ್ನು ಸಮರ್ಪಕವಾಗಿ ಬಳಸಿರುವ ಸಿಂಹ ಅವರನ್ನ್ನು ಬಲಿಪಶು ಮಾಡುವುದು ಸರಿಯಲ್ಲ ಎಂದ ಅವರು, ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದು ನಿಶ್ಚಿತ ಎಂದರು.
ಪಕ್ಷದ ಕಾರ್ಯಕರ್ತರಾದ ಎಂ.ಡಿ.ಕೃಷ್ಣಪ್ಪ, ಸುಮನ್‌ಗೌಡ, ಪುಷ್ಪಾ ನಾಗೇಶ್, ಇಂದಿರಾ ರಮೇಶ್, ಬಿ.ಅಮೃತ್‌ರಾಜ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net