ಪರಸ್ಪರ ಸಹಕಾರದಿಂದ ಆಚರಣೆ ಮಾಡಿ

19 MDL 04
ಮುದಗಲ್‌ನ ನೀಲಕಂಠೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಯಿತು. ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ, ಸಿಪಿಐ ಬಾಲಚಂದ್ರ ಲಕ್ಕಂ, ಪಿಎಸ್‌ಐ ವೆಂಕಟೇಶ ಮಾಡಗೇರಿ, ಪುರಸಭೆ ಮುಖ್ಯಾಧಿಕಾರಿ ಪ್ರವೀಣ ಭೋಗಾರ, ಅಬಕಾರಿ ನಿರೀಕ್ಷಕಿ ಲಕ್ಷ್ಮೀ, ಅಗ್ನಿಶಾಮಕ ದಳದ ಅಧಿಕಾರಿ ಹೊನ್ಪಪ್ಪ, ಜೆಸ್ಕಾಂನ ಜೆ.ಇ.ಬನ್ನೆಪ್ಪ ಇತರರಿದ್ದರು.
Published on

ಮುದಗಲ್: ಪಟ್ಟಣವು ಭಾವೈಕ್ಯಕ್ಕೆ ಹೆಸರಾಗಿದ್ದು ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿಯಿಂದ ಆಚರಿಸಬೇಕು ಎಂದು ಎಎಸ್ಪಿ (ಅಪರಾಧ ವಿಭಾಗ) ಜಿ.ಹರೀಶ ಹೇಳಿದರು.

ಇಲ್ಲಿನ ನೀಲಕಂಠೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದಲ್ಲಿ ಇತಿಹಾಸ ಪ್ರಸಿದ್ಧ ಮೊಹರಂನಂತೆ ಇನ್ನುಳಿದ ಹಬ್ಬಗಳ ಆಚರಣೆಯನ್ನು ಶ್ರದ್ಧಾ ಭಕ್ತಿ, ಪರಸ್ಪರ ಸಹಕಾರ ಮನೋಭಾವದಿಂದ ಮಾಡಬೇಕು ಎಂದರು.

ಪ್ರಮುಖ ಗುರುಬಸಪ್ಪ ಸಜ್ಜನ್ ಮಾತನಾಡಿ, ಹಬ್ಬದ ವೇಳೆ ಗಲಾಟೆ ಮಾಡುವ ಕೆಲ ಯುವಕರಿಗೆ ಹಿರಿಯರು ಬುದ್ಧಿವಾದ ಹೇಳಿ, ನಿಗಾ ವಹಿಸಬೇಕು ಎಂದರು. ಮುಸ್ಲಿಂ ಧರ್ಮಗುರು ಮೌಲಾನಾ ಜಮೀರ್ ಅಹ್ಮದ್ ಖಾಜಿ ಮಾತನಾಡಿ, ಯಾರಿಗೂ ತೊಂದರೆ ಆಗದಂತೆ ಹಬ್ಬ ಆಚರಿಸಬೇಕು ಎಂದರು.

ಲಿಂಗಸಗೂರು ಕೆಡಿಪಿ ಸದಸ್ಯ ರಾಘು ಕುದುರಿ, ಪುರಸಭೆ ಸದಸ್ಯರಾದ ಅಮೀರಬೇಗ್ ಉಸ್ತಾದ್, ಮೆಹಬೂಬ್ ಸಾಬ್ ಕಡ್ಡಿಪುಡಿ, ಕರವೇ ಅಧ್ಯಕ್ಷ ಎಸ್.ಎ.ನಯೀಂ, ಮುಖಂಡರಾದ ನ್ಯಾಮತ್ ಖಾದ್ರಿ, ಮಲ್ಲಪ್ಪ ಹೂಗಾರ, ಮಾಸೂಮ್ ಷರೀಫ್, ತಿಪ್ಪಣ್ಣ ರಾಠೋಡ, ರೆಹಮಾನ್ ಡಿ.ಜಂಬಾಳಿ, ನಾಗರಾಜ ತಳವಾರ, ಯಮನೂರ್ ನದಾಫ್, ರವಿ ಕಟ್ಟಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net