ಒಗ್ಗಟ್ಟಿನಿಂದ ಜಯಂತಿ ಆಚರಿಸೋಣ

26BRG1
Published on

ಬೋರಗಾಂವ: ಮಹಾತ್ಮ ಬಸವೇಶ್ವರ ಮತ್ತು ಹಿಂದವಿ ಸ್ವರಾಜ್ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಒಗ್ಗಟ್ಟಿನಿಂದ ಆಚರಿಸೋಣ ಎಂದು ನಿವೃತ್ತ ಪ್ರಾಧ್ಯಾಪಕ ಸಂಜಯ ಖೋತ ಹೇಳಿದರು.

ಶಿರದವಾಡ ಗ್ರಾಮದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಲಿಂಗಾಯತ ಮತ್ತು ಮರಾಠ ಸಮುದಾಯದ ವತಿಯಿಂದ ಶಿವಬಸವ ಜಯಂತಿಯನ್ನು ಒಟ್ಟಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ನಿವೃತ್ತ ಪ್ರಾಧ್ಯಾಪಕ ಶಶಿಕಾಂತ ನಲವಡೆ ಮಾತನಾಡಿ, ಅದ್ದೂರಿ ಶಿವಬಸವ ಜಯಂತಿ ಆಚರಣೆಗೆ ಮರಾಠ ಮತ್ತು ಲಿಂಗಾಯತ ಸಮುದಾಯದ ಜನರು ಕೆಲಸ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಮುಖಂಡರಾದ ಸುನೀಲ ಪಡಲಾಳೆ ಹಾಗೂ ಸಂಜಯ ಪಾಟೀಲ ಮಾತನಾಡಿ, ಮೇ 1ರಂದು ಸಂಜೆ 4 ಗಂಟೆಗೆ ಶಿವಬಸವ ಜಯಂತಿಯ ಭವ್ಯ ಮೆರವಣಿಗೆ ಜರುಗಲಿದ್ದು, 15 ಕುದುರೆಗಳು, 11 ರಥಗಳು, ಸಾಂಪ್ರದಾಯಿಕ ಸಂಗೀತ ವಾದ್ಯಗಳು, ಜನವಾಡದ ಲೆಜಿಮ್ ಆಟಗಳು ಭಾಗವಹಿಸಲಿವೆ. ಏ.30ರಂದು ಶಿವ ಬಸವ ಜ್ಯೋತಿ ಸ್ವಾಗತಿಸಲಾಗುವುದು. ಮೇ 2ರಂದು ಮಹಾಪ್ರಸಾದ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ ಖೋತ, ವಿಶ್ವರಾವ ನಲವಡೆ, ಶೀತಲ ಪಾಟೀಲ, ಸಂಜಯ ಪಾಟೀಲ, ನಾರಾಯಣ ಹಿರವೆ, ವಸಂತ ಹಿರೇಕುಡೆ, ಅಪ್ಪಾಸಾಹೇಬ ಇಂಗಳೆ, ಪ್ರಕಾಶ ಪಾಟೀಲ, ಶಿವಗೊಂಡ ಪಾಟೀಲ, ಆನಂದ ಪಾಟೀಲ, ಸಂದೀಪ ಖೋತ, ಕಾಕಾ ಖರಪೆ, ಅಜಿತ್ ತೋಡಕರ, ಸಚಿನ ಪಡಲಾಳೆ, ರವೀಂದ್ರ ಸ್ವಾಮಿ, ರವಿ ಕೋಕಣೆ, ಸಂಜಯ ಹಟಕರ್, ಕಿರಣ್ ಪಡಲಾಳೆ ಇತರರು ಇದ್ದರು. ಸಂದೀಪ ಪಾಟೀಲ ನಿರೂಪಿಸಿದರು. ಪಾಂಡುರಂಗ ಖೋತ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net