ಸೌಹಾರ್ದದಿಂದ ಹಬ್ಬ ಆಚರಿಸಲಿ

7Kagavad1
Published on

ಕಾಗವಾಡ: ಹಿಂದು ಮತ್ತು ಮುಸ್ಲಿಂ ಸಮುದಾಯದವರು ಸೌಹಾರ್ದದಿಂದ ರಂಜಾನ್ ಹಾಗೂ ಹೋಳಿ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್

ರೋಷನ್ ಹೇಳಿದರು.

ತಾಲೂಕಿನ ಶಿರಗುಪ್ಪಿ ಗ್ರಾಪಂ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಶಾಂತಿಪಾಲನೆ ಸಭೆ ಮತ್ತು ಎಸ್‌ಸಿ, ಎಸ್‌ಟಿ ಸಮುದಾಯದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.

ಎಸ್‌ಪಿ ಡಾ. ಭೀಮಾಶಂಕರ ಗುಳೇದ ಮಾತನಾಡಿ, ಕಾಮಣ್ಣನ ದಹನದ ವೇಳೆ ಚಿಕ್ಕ ಮಕ್ಕಳ ಬಗ್ಗೆ ಜಾಗ್ರತೆಯಿಂದ ಇರಬೇಕು. ನೈಸರ್ಗಿಕ ಬಣ್ಣ ಉಪಯೋಗ ಮಾಡಬೇಕು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು. ದಲಿತ ಮುಖಂಡ ಸಂಜಯ ತಳವಳಕರ ಮಾತನಾಡಿ, ಶಾಂತಿ ಸಭೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಕುಂದು ಕೊರತೆ ಕುರಿತು ಚರ್ಚಿಸುವುದು ಬೇಡ. ಅದಕ್ಕಾಗಿ ಪ್ರತ್ಯೇಕ ಸಭೆ ನಡೆಸಿ ಎಂದು ಸಲಹೆ ನೀಡಿದರು. ಇದಕ್ಕೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿ ಕುಂದು ಕೊರತೆ ಪಾಲನೆ ಸಭೆ ಪ್ರತ್ಯೇಕವಾಗಿ ಕರೆಯಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ರಾಜೇಶ ಬುರ್ಲಿ, ಡಿವೈಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಸಂತೋಷ ಹಳ್ಳೂರ, ಶಿರಗುಪ್ಪಿ ಗ್ರಾಪಂ ಅಧ್ಯಕ್ಷೆ ಶೋಭಾ ಗದಾಳೆ, ಉಪಾಧ್ಯಕ್ಷ ರಾಮಗೌಡ ಪಾಟೀಲ, ಅಬಕಾರಿ ಅಧಿಕಾರಿ ಮಹಾಂತೇಶ ಬಂಡಗಾರ, ಪಿಎಸ್‌ಐ ಬಸನಗೌಡ ಬಿರಾದಾರ, ಅಣ್ಣಾಸಾಹೇಬ ಕೋರೆ, ಎಸ್.ಡಿ. ಮುಲ್ಲಾ, ಪಿಡಿಒ ಶಿಲ್ಪಾ ನಾಯಿಕವಾಡಿ, ಗ್ರಾಮಾಡಳಿತಾಧಿಕಾರಿ ಸುನೀಲ ಕಾಂಬಳೆ, ಮುಖಂಡರಾದ ವಿಜಯ ಅಕಿವಾಟೆ, ಈರಗೌಡ ಪಾಟೀಲ, ಈಶ್ವರ ಕಾಂಬಳೆ, ಸಚಿನ ಕಾಂಬಳೆ, ರಮೇಶ ಕಾಂಬಳೆ, ಗೌತಮ ಜತ್ರಾಟೆ, ರವಿ ಕುರಣೆ, ಇಕ್ಬಾಲ್ ಕನವಾಡೆ ಪವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net