ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಿಸೋಣ

13 MDG 2
Published on

ಮುಂಡರಗಿ: ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ಶಾಲಾ-ಕಾಲೇಜ್‌ನವರು ರಾಷ್ಟ್ರ ಧ್ವಜದ ಶಿಷ್ಟಾಚಾರಕ್ಕೆ ಧಕ್ಕೆ ಬಾರದಂತೆ ನಿಯಮ ಪಾಲಿಸಬೇಕು. ಪ್ರತಿಯೊಬ್ಬರೂ ಅದ್ದೂರಿಯಿಂದ ಗಣರಾಜ್ಯೋತ್ಸವ ಆಚರಿಸೋಣ ಎಂದು ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್. ಹೇಳಿದರು. ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಗಣರಾಜ್ಯೋತ್ಸವ ಆಚರಣೆ ಕುರಿತು ಇತ್ತೀಚೆಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾ.ಪಂ. ಇಒ ವಿಶ್ವನಾಥ ಹೊಸಮನಿ, ಉಪತಹಸೀಲ್ದಾರ್ ಎಸ್.ಎಸ್. ಬಿಚ್ಚಾಲಿ, ಸುರೇಶ ಹಲವಾಗಲಿ, ಬಸವರಾಜ ದೇಸಾಯಿ, ಲಕ್ಷ್ಮಣ ತಗಡಿನಮನಿ, ಬಸವರಾಜ ನವಲಗುಂದ, ಎಸ್.ಆರ್. ಚಿಗರಿ, ಅಡಿವೆಪ್ಪ ಚಲವಾದಿ, ಮಂಜುಳಾ ಇಟಗಿ, ಮಂಜುನಾಥ ಮುಧೋಳ, ದೃವಕುಮಾರ ಹೊಸಮನಿ, ಅಶ್ವಿನಿ ಗೌಡರ, ಸೋಮಣ್ಣ ಹೈತಾಪೂರ, ಕಾಶೀನಾಥ ಶಿರಬಡಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net