

ಹುಬ್ಬಳ್ಳಿ: ಈ ಬಾರಿಯ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸೋಣ. ಶಾಂತಿಗೆ ಭಂಗ ಆಗದಂತೆ ನಾವೆಲ್ಲರೂ ಎಚ್ಚರವಹಿಸೋಣ ಎಂದು ಹುಬ್ಬಳ್ಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾ ಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ವಿನಂತಿಸಿದರು.
ನಗರದ ಮೂರುಸಾವಿರ ಮಠದ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಹುಬ್ಬಳ್ಳಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾ ಮಂಡಳದ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹುಬ್ಬಳ್ಳಿ ಗಣೇಶೋತ್ಸವ ತನ್ನದೇ ಆದ ವಿಶಿಷ್ಟತೆ ಹೊಂದಿದೆ. ಹುಬ್ಬಳ್ಳಿಗೆ ಆಗಮಿಸುವ ಗಣೇಶ ಭಕ್ತರಿಗೆ ಯಾವುದೇ ರೀತಿ ಅನನುಕೂಲ ಆಗದಂತೆ ನಾವೆಲ್ಲರೂ ಸಹಕರಿಸುವುದು ನಮ್ಮ ಕರ್ತವ್ಯ ಆಗಬೇಕು. ಅಲ್ಲದೇ ಗಣೇಶ ಮೂರ್ತಿ ತರುವಾಗ ಮತ್ತು ಕಳುಹಿಸುವಾಗ ನಮ್ಮ ಸಂಸ್ಕಾರದ ವಾದ್ಯ ಮೇಳ ಅಳವಡಿಸಿಕೊಂಡು ಜನರ ಮನ ಗೆಲ್ಲಬೇಕು. ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಹಾಗೂ ಮಾಧ್ಯಮದವರು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದರು.
ಸಭೆಯಲ್ಲಿ ಸಾಧನಾ ಪೂಜಾರ, ಅನಿಲ ಕವಿಶೆಟ್ಟಿ, ಮಂಜುನಾಥ ರತನ, ಬಸು ಮಹೇಂದ್ರಕರ, ಸೋಮಶೇಖರ ಶೆಟ್ಟರ್, ಸಂತೋಷ ಶೆಟ್ಟಿ, ಸಂತೋಶ ವೆರ್ಣೇಕರ, ಡಾ. ಚಿದಾನಂದ ತೆಗ್ಗಿಹಳ್ಳಿ, ಡಾ. ಸುರೇಶ ಮೆಣಸಗಿ, ಶ್ರೀನಿವಾಸ ಗೋಚಗೇರಿ, ಅನಿಲ ಬೇವಿನಕಟ್ಟಿ, ಈರಣ್ಣ ಪಾಳೇದ, ನಾರಾಯಣ ಶಿಂಧೆ, ಎಸ್.ಎಂ. ಅಂಗಡಿ, ಎಫ್.ಬಿ. ಬೀರವಳ್ಳಿ, ರೂಪಾ ಅಂಗಡಿ, ಅಕ್ಕಮ್ಮ ಕಂಬಳಿ, ಸರಸ್ವತಿ ಮೆಹರವಾಡೆ, ಗಾಯತ್ರಿ ನೆಲ್ಲಿಕೊಪ್ಪ ಸೇರಿದಂತೆ ಇತರರು ಗಣೇಶ ಹಬ್ಬದ ವಾತಾವರಣ ಕುರಿತು ಮಾತನಾಡಿದರು.
ಎಸ್.ಎಸ್. ಕಮಡೊಳ್ಳಿಶೆಟ್ರು, ರೋಹನ ಗೊಂದಕರ, ಪಾಂಡುರಂಗ ಮುಸಳೆ, ಸಿ.ಜಿ. ಧಾರವಾಡಶೆಟ್ರು ಇತರರು ಇದ್ದರು.
ಮಹಾಮಂಡಳದ ಉಪಾಧ್ಯಕ್ಷ ಶಾಂತರಾಜ ಪೋಳ ಸ್ವಾಗತಿಸಿದರು. ಕಾರ್ಯದರ್ಶಿ ಅಮರೇಶ ಹಿಪ್ಪರಗಿ ನಿರೂಪಿಸಿದರು. ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ ವಂದಿಸಿದರು. ಸಂತೋಷ ಕಟ್ಟಿ, ಚಂದ್ರಶೇಖರ ಗಾಣಿಗೇರ, ಅನಿತಾ ಜಡಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.