ಶಾಂತಿ, ಸೌಹಾರ್ದದಿಂದ ಗಣೇಶ ಹಬ್ಬ ಆಚರಿಸಲಿ

Hly shanti sabhe
Published on

ಹಳಿಯಾಳ: ನಿಯಮಗಳನ್ನು ಪಾಲಿಸುವುದರೊಂದಿಗೆ ಶಾಂತಿ, ಸೌಹಾರ್ದದಿಂದ ಗಣೇಶ ಹಬ್ಬವನ್ನು ಆಚರಿಸಬೇಕು ಎಂದು ತಾಲೂಕಿನ ಗಣೇಶೋತ್ಸವ ಮಂಡಳಗಳಿಗೆ ಡಿವೈಎಸ್ಪಿ ಶಿವಾನಂದ ಕಟಗಿ ಮನವಿ ಮಾಡಿದರು.

ಪಟ್ಟಣದ ಪುರಭವನದಲ್ಲಿ ಮಂಗಳವಾರ ಗಣೇಶ ಚತುರ್ಥಿ ಪೂರ್ವಭಾವಿ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.
ಪಿಎಸ್‌ಐ ವಿನೋದ ರೆಡ್ಡಿ ಮಾತನಾಡಿ, ಗಣೇಶೋತ್ಸವ ಸಮಿತಿಯವರಿಗೆ ಎಲ್ಲ ಇಲಾಖೆಗಳಿಂದ ಸಹಕಾರ ನೀಡಲಾಗುತ್ತದೆ ಎಂದರು.

ಭಾರಿ ಶಬ್ದದ ಡಿಜೆ ಬಳಸಲು ಅವಕಾಶ ನೀಡದಿರುವ ಬಗ್ಗೆ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದರು. ಶಾಂತಿಯುತವಾಗಿ ಹಬ್ಬ ಆಚರಿಸುವುದಾಗಿ ಗಣೇಶ ಸಮಿತಿ ಒಪ್ಪಿಗೆ ಸೂಚಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಮಾಜಿ ಉಪಾಧ್ಯಕ್ಷೆ ಸುವರ್ಣ ಮಾದರ, ತಾಪಂ ಅಧಿಕಾರಿ ಪರಶುರಾಮ ಘಸ್ತೆ, ಪುರಸಭೆ ಮುಖ್ಯಾಧಿಕಾರಿ ಅಶೋಕ್ ಸಾಳೇನವರ, ಸಿಪಿಐ ಸುರೇಶ್ ಶಿಂಘೆ, ಹೆಸ್ಕಾಂ ಅಧಿಕಾರಿ ರವೀಂದ್ರ ಮೇಟಗುಡ್ಡ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net