ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸೋಣ; ಡಾ. ಪದ್ಮಿನಿ ನಾಗರಾಜು

KASAPA PARISARA GANESH
ವಿಜಯಪುರ ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಪರಿಸರ ಸ್ನೇಹಿ ಗಣೇಶೋತ್ಸವ ಚಿಂತನ ಗೋಷ್ಠಿಯಲ್ಲಿ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಡಾ. ಪದ್ಮಿನಿ ನಾಗರಾಜು, ಡಾ.ವಿ.ಡಿ. ಐಹೊಳ್ಳಿ, ಡಾ.ರವಿ ಗೋಲಾ, ಪ್ರದೀಪ ಕುಲಕರ್ಣಿ, ರೇಖಾ ಬಾಕಿ ಮತ್ತಿತರರಿದ್ದಾರೆ.
Published on

ವಿಜಯಪುರ: ಭಾರತೀಯ ಸನಾತನ ಸಂಸ್ಕೃತಿ ಹಾಗೂ ಪರಂಪರೆಗಳಲ್ಲೊಂದಾದ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮಿನಿ ನಾಗರಾಜು ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ಪರಿಸರ ಸ್ನೇಹಿ ಗಣೇಶೋತ್ಸವ ಚಿಂತನ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಸನಾತನ ಸಂಸ್ಕೃತಿ ಹಾಗೂ ಪರಂಪರೆಯ ಹಬ್ಬಗಳಲ್ಲಿ ಒಂದಾದ ಗಣೇಶನ ಹಬ್ಬವು ಒಂದು ವಿಶಿಷ್ಟ ಹಾಗೂ ಸಾಂಸ್ಕೃತಿಕ ಹಬ್ಬವಾಗಿದ್ದು, ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸಿ ಕೆರೆ, ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ಜಲಮೂಲಗಳು ಕಲುಷಿತಗೊಂಡು ಪರಿಸರ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣಲೇಪಿತ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡದೇ ಶುದ್ಧ ಜೇಡಿಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಕಲ್ಪ ಮಾಡೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಡಾ.ವಿ.ಡಿ. ಐಹೊಳ್ಳಿ ಮಾತನಾಡಿ, ಇಂದು ನಾವೆಲ್ಲರೂ ಶಬ್ದ ಮಾಲಿನ್ಯ, ಜಲಮಾಲಿನ್ಯ, ವಾಯು ಮಾಲಿನ್ಯಗಳಾಗದಂತೆ ಮುನ್ನೆಚ್ಚರಿಕೆ ವಹಿಸಿ ಗಣೇಶನ ಹಬ್ಬ ಆಚರಿಸಿದಾಗ ಮಾತ್ರ ನಮ್ಮ ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಸಾಧ್ಯ ಎಂದರು.

ಡಾ. ಆನಂದ ಕುಲಕರ್ಣಿ, ಡಾ. ಮಾಧವ ಗುಡಿ, ಅಭಿಷೇಕ ಚಕ್ರವರ್ತಿ,, ವಿದ್ಯಾವತಿ ಅಂಕಲಗಿ, ಸುಖದೇವಿ ಅಲಬಾಳಮಠ ಮಾತನಾಡಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಜಯಶ್ರೀ ಹಿರೇಮಠ, ಸಿದ್ರಾಮಯ್ಯ ಲಕ್ಕುಂಡಿಮಠ, ಕಾಮರಾಜ ಬಿರಾದಾರ, ಶಿವಾನಂದ ಬಡಾನೂರ, ಜಿ.ಪಿ. ಬಿರಾದಾರ, ಸಿದ್ದಪ್ಪ ಮಾನೆ, ಶಿವಾನಂದ ಡೋಣೂರ, ಭಾಗೀರಥಿ ಸಿಂಧೆ, ಲತಾ ಗುಂಡಿ, ಬಾಬು ವಾಡೆದ, ಶಿವಪುತ್ರ ಅಂಕದ, ಖಾದರ್ ವಾಲೀಕಾರ, ಮಕಬುಲ ಕೀಜಿ, ಕೆ.ಬಿ. ಕುಲಕರ್ಣಿ, ದಾದಾಪೀರ ತಾಳಿಕೋಟಿ, ಬಸವರಾಜ ಹುಣಸಿಕಟ್ಟಿ, ಸುರೇಶ ಜತ್ತಿ, ಸಾತಪ್ಪ ಗೊಂಗಡಿ ಮತ್ತಿತರರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ.ರವಿ ಗೋಲಾ, ಪ್ರದೀಪ ಕುಲಕರ್ಣಿ, ರೇಖಾ ಬಾಕಿ, ಖಾಜಾಪಟೇಲ ಪಟೇಲ್, ಬಸವರಾಜ ನಂದಿಹಾಳ, ಮಹಾಂತೇಶ ನೂಲಾನವರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಕ ಮೆಹತಾಬ ಕಾಗವಾಡ ಪ್ರಾರ್ಥಿಸಿದರು. ಶೋಭಾ ಮೇಡೆಗಾರ ಸ್ವಾಗತಿಸಿ ಗೌರವಿಸಿದರು. ಗೌರವ ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕಿತ್ತೂರ ಪರಿಸರ ಜಾಗೃತಿ ಗೀತೆ ಪ್ರಸ್ತುತಪಡಿಸಿದರು. ಮಹಮ್ಮದ್ ಗೌಸ್ ಹವಾಲಾರ್ ಸಾಧಕರಿಗೆ ಗೌರವ ಪುರಸ್ಕಾರ ನೆರವೇರಿಸಿದರು. ಶಿಕ್ಷಕಿ ಶಿಲ್ಪಾ ಹಂಜಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net