ವ್ಯಸನಮುಕ್ತ ಸಮಾಜ ನಿರ್ಮಿಸೋಣ

h8-sakri
Published on

ಹುಬ್ಬಳ್ಳಿ: ಧಾರವಾಡ ವ್ಯಸನಮುಕ್ತ ಸಂಘ, ಜೆಎಸ್‌ಎಸ್ ಸಕ್ರಿ ಕಾನೂನು ಕಾಲೇಜ್ ಆಶ್ರಯದಲ್ಲಿ ಇಲ್ಲಿಯ ಸಂತೋಷ ನಗರದ ಚೈತ್ರಾ ಕನ್ನಡ ಕಾನ್ವೆಂಟ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ವ್ಯಸನಮುಕ್ತ ಆರೋಗ್ಯಕರ ಜೀವನ, ಜಾಗೃತಿ ಚಟುವಟಿಕೆಗಳು ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ನಿವೃತ್ತ ಪ್ರಾಚಾರ್ಯೆ ಡಾ. ವೀಣಾ ಎಂ. ಟೋಣಪಿ ಮಾತನಾಡಿ, ಮದ್ಯಪಾನ ಮತ್ತು ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ದೈಹಿಕ, ಮಾನಸಿಕ ಅನಾರೋಗ್ಯವೂ ಹೆಚ್ಚಲಿದೆ. ಸದೃಢ ಸಮಾಜ, ದೇಶ ನಿರ್ಮಾಣವಾಗಬೇಕೆಂದರೆ ನಾವೆಲ್ಲರೂ ವ್ಯಸನಮುಕ್ತರಾಗಬೇಕು ಎಂದರು.
ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋದಿಸಲಾಯಿತು.
ಮುಖ್ಯೋಪಾಧ್ಯಾಯಿನಿ ನಿರ್ಮಲಾ ಎಸ್. ಅಂಬ್ಲಿಯವರ ಅಧ್ಯಕ್ಷತೆ ವಹಿಸಿದ್ದರು.
ಶಾರದಾ ಜಿ., ಸುರೇಶ ಲಿಂಬಿಕಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net