

ನೆಲಮಂಗಲ : ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲು ರೋಟರಿ ಸಂಸ್ಥೆಯ ಕೊಡುಗೆ ಅಪಾರ ಎಂದು ರೋಟರಿ ಜಿಲ್ಲಾ ಗವರ್ನರ್ ಡಾ.ಎಲಿಜಬೆತ್ ಚೆರಿಯನ್ ತಿಳಿಸಿದರು. ನಗರದ ಸದಾಶಿವನಗರ ರೋಟರಿ ಭವನದ ಮುಂಭಾಗದಿಂದ ರೋಟರಿ ಸಂಸ್ಥೆ ಹಾಗೂ ಇನ್ನರ್ ಸ್ಟೀಲ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೋಲಿಯೋ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು. ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಸಂಸ್ಥೆ ಪಲ್ಸ್ ಪೋಲಿಯೋ ಹಾಕಿಸುವಲ್ಲಿ ಮುಂಚೂಣಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಭಾರತದಲ್ಲಿ 2011ರಿಂದ ಈಚೆಗೆ ಯಾವುದೆ ಮಗುವಿಗೆ ತೊಂದರೆಯಾಗಿಲ್ಲ ರೋಟರಿ ಸಂಸ್ಥೆ 30 ವರ್ಷದಿಂದ ಇಂತಹ ಮಾಹನ್ ಕಾರ್ಯದಲ್ಲಿ ತೊಡಗಿದೆ. ನೆರೆಯ ದೇಶಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ನೈಜಿರೀಯಾ ದೇಶಗಳ ಮಕ್ಕಳಲ್ಲಿ ಇನ್ನು ಕಾಯಿಲೆ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಭಾರತದಲ್ಲಿ ಮುಂದಿನ ದಿನಗಳಲ್ಲಿ ಸಂಪೂರ್ಣ ನಿಮೂರ್ಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು ಮಾತನಾಡಿ, ಫಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಮಾಹಿತಿ ಕೊರತೆಯಿಂದ ಸೂಕ್ತ ಕಾಲದಲ್ಲಿ ಪೋಲಿಯೊ ಲಸಿಕೆಯನ್ನು ಮಕ್ಕಳಿಗೆ ಹಾಕಿಸುವಲ್ಲಿ ತಪ್ಪಿಸಿದರೆ, ಅದರಿಂದ ಉಂಟಾಗುವ ಪರಿಣಾಮ ಜೀವನದುದ್ದಕ್ಕೂಮಗುವಿಗೆ ಕಾಡುವಂತಾಗುತ್ತದೆ. ಆದರಿಂದ ಸರ್ಕಾರ ಈ ಬಗ್ಗೆ ಕ್ರಮವಹಿಸಿದ್ದು, ಇದರ ಸದುಪಯೋಗವಾಗಬೇಕು. ಪ್ರತಿ ವರ್ಷವೂ ರೋಟರಿ ಸಂಸ್ಥೆಯಿಂದ ಪೋಲಿಯೊ ಅರಿವು ಕಾರ್ಯಕ್ರಮವನ್ನು ವಿಭಿನ್ನವಾಗಿ ಮಾಡಲಾಗುತ್ತಿದೆ ಎಂದರು.
ಮಾಜಿ ಅಧ್ಯಕ್ಷರಾದ ಎಂ.ಎನ್.ಹರೀಶ್ಕುಮಾರ್, ಎನ್.ಜಿ.ನಾಗರಾಜು, ಎಂ.ಟಿ.ನವೀನ್ಕುಮಾರ್ ಟಿ.ನಾಗರಾಜು, ಸಿ.ಜಿ.ಮಂಜುನಾಥ್, ವಿ.ಆರ್.ಸ್ವಾಮಿ, ಕೆ.ಮಂಜುನಾಥ್, ಸುರೇಂದ್ರನಾಥ್, ನಿಯೋಜಿತ ಅಧ್ಯಕ್ಷ ಕೆ.ಎಸ್.ಲೋಕೇಶ್, ನಿರ್ದೇಶಕರಾದ ಸುಶೀಲ್ಕುಮಾರ್, ಶಿವಶಂಕರ್ ಪ್ರಸಾದ್, ಕುಮಾರ್, ಹನುಮಂತರಾಜು, ರಾಜಶೇಖರ್, ಇನ್ನರ್ವೀಲ್ ಅಧ್ಯಕ್ಷೆ ಪೂರ್ಣಿಮಾಸುಗ್ಗರಾಜು, ಕಾರ್ಯದರ್ಶಿ ಮಂಜುಳಾಸಿದ್ದರಾಜು, ಮಾಜಿ ಅಧ್ಯಕ್ಷೆ ಉಮಾನಾರಾಯಣ್, ರೋಟರಿ ಅರುಣೋದಯ ಅಧ್ಯಕ್ಷ ಎಂ.ಗಂಗಣ್ಣ, ಕಾರ್ಯದರ್ಶಿ ಕೇಶವಮೂರ್ತಿ, ನಿರ್ದೇಶಕ ಕಿರಣ್, ಪ್ರಸನ್ನ, ಚೌಡಪ್ಪ, ನಟರಾಜು, ರಾಕೇಶ್, ರವಿ ಮತ್ತಿತರರು ಇದ್ದರು.
ಬೆಳ್ಳಿರಥದಲ್ಲಿ ಜಾಗೃತಿ ಜಾಥಾ : ಪೋಲಿಯೋಮುಕ್ತ ಸಮಾಜ ನಿಮಾರ್ಣ ಮಾಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆಯಿಂದ ಅಯೋಜಿಸಿದ್ದ ಪೋಲಿಯೋ ಜಾಗೃತಿ ಜಾಥಾ ಹಿನ್ನೆಲೆ ನಗರದ ರೋಟರಿ ಭವನದ ಮುಂಭಾಗದಿಂದ ಆರಂಭಿಸಿ ಅಂಬೇಡ್ಕರ್ ವೃತ್ತ, ಜಯನಗರ ಬಾಬುಜಗಜೀವನ್ ರಾಮ್ ವೃತ್ತ, ಮುಖ್ಯ ರಸ್ತೆಯ ಮೂಲಕ ಬಿನ್ನಮಂಗಲವರೆಗೂ ಬೆಳ್ಳಿ ರಥದಲ್ಲಿ ಸುಮಾರು 4 ಕಿಮೀ ಜಾಥಾ ನಡೆಸಿದರು.