ಭವ್ಯ ಭಾರತ ನಿರ್ಮಿಸೋಣ

Let's build a great India
ಆಲಮೇಲದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕ ಆಡಳಿತದ ವತಿಯಿಂದ ತಹಸೀಲ್ದಾರ್ ಸುರೇಶ ಚಾವಲರ ಧ್ವಜಾರೋಹಣ ನೆರವೇರಿಸಿದರು.
Published on

ಆಲಮೇಲ: ಬ್ರಿಟಿಷ ಆಳ್ವಿಕೆಯಿಂದ ಮುಕ್ತಗೊಳಿಸಲು ಹೋರಾಡಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಅಸಂಖ್ಯಾತ ಸ್ವಾತಂತ್ರೃ ಹೋರಾಟಗಾರರ ಪ್ರಯತ್ನವಿಲ್ಲದೆ ಭಾರತವು ಸ್ವಾತಂತ್ರೃ ಗಳಿಸಲು ಸಾಧ್ಯವಾಗುತ್ತಿರಲ್ಲಿಲ್ಲ ಎಂದು ತಹಸೀಲ್ದಾರ್ ಸುರೇಶ ಚಾವಲರ ಹೇಳಿದರು.

ಪಟ್ಟಣದ ಇಂಡಿ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ತಾಲೂಕ ಆಡಳಿತದ ವತಿಯಿಂದ 77ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ತ್ಯಾಗ ಬಲಿದಾನದ ಮೂಲಕ ನಮಗೆ ದೊರಕಿರುವ ಸ್ವಾತಂತ್ರೃವನ್ನು ಇಂದಿನ ಯುವಕರು ನೆನಪಿಸಿಕೊಂಡು ಸ್ವಾಭಿಮಾನದ ಜತೆಗೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಭವ್ಯ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ತೆರೆದ ವಾಹನದಲ್ಲಿ ತಾಲೂಕು ಆಡಳಿತದ ವತಿಯಿಂದ ತಹಸೀಲ್ದಾರ್ ಸುರೇಶ ಚಾವಲರ ಹಾಗೂ ಪಿಎಸ್‌ಐ ಕುಮಾರ ಹಾಡಕಾರ ಪರೇಡ್ ವೀಕ್ಷಿಸಿದರು.

ತರ ಪೊಲೀಸ್ ಸಿಬ್ಬಂದಿ, ಹೋಮ್‌ಗಾರ್ಡ್ ಹಾಗೂ ಶಾಲಾ ಮಕ್ಕಳಿಂದ ಪರೇಡ್ ನಡೆಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

80ವರ್ಷ ಮೇಲ್ಪಟ್ಟ ಐವರು ವೃದ್ಧರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು.

ಕರವೇ ತಾಲೂಕು ಅಧ್ಯಕ್ಷ ಶಶಿಧರ ಗಣಿಹಾರ ಉಪಹಾರದ ವ್ಯವಸ್ಥೆ ಮಾಡಿದ್ದರು. ಪಪಂ ಮುಖ್ಯಾಧಿಕಾರಿ ಜಿ.ವಿ. ಹಣ್ಣಿಕೇರಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರವಿ ಬಿರಾದಾರ, ಉಪ ತಹಸೀಲ್ದಾರ್ ಜಿ.ಟಿ. ನಾಯಕ, ಶಿರಸ್ತೇದಾರ ಪಿ.ಎಸ್. ಮುಕಿಹಾಳ, ಕಂದಾಯ ನಿರೀಕ್ಷಕ ಎ.ಎಂ. ಅತ್ತಾರ, ರವಿ ಹೊಸಮನಿ, ಆಲಮೇಲ ಅರ್ಬನ್ ಬ್ಯಾಂಕ್ ಅಧ್ಯಕ್ಷ ಶಿವುಕುಮಾರ ಗುಂದಗಿ, ನಾಗರಿಕ ವೇದಿಕೆ ಅಧ್ಯಕ್ಷ ರಮೇಶ ಭಂಟನೂರ, ಬಿ.ಜಿ. ನಾರಾಯಣಕರ, ಲಾಲ್‌ಸಾಬ ದೇವರಮನಿ, ಸೈಪನ್ ವಾಲೀಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net