100 ಹಾಸಿಗೆ ತಾಲೂಕಾಸ್ಪತ್ರೆ ನಿರ್ಮಿಸಲಿ

09082022 harapanahhali Shashikala jolle
Published on

ನಿಪ್ಪಾಣಿ: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಿ 100 ಹಾಸಿಗೆಗಳ ತಾಲೂಕು ಆಸ್ಪತ್ರೆಯನ್ನಾಗಿ ಪರಿವರ್ತಿಸಬೇಕೆಂದು ಶಾಸಕಿ ಶಶಿಕಲಾ ಜೊಲ್ಲೆ ಅವರು ಆರೋಗ್ಯ ಸಚಿವ ಡಾ. ದಿನೇಶ್ ಗುಂಡೂರಾವ್ ಅವರಿಗೆ ಆಗ್ರಹಿಸಿದರು.

ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಆರೋಗ್ಯ ಸಚಿವ ಡಾ. ದಿನೇಶ್ ಗುಂಡುರಾವ್ ಅವರಿಗೆ ಪ್ರಶ್ನೆ ಕೇಳಿದ ಶಾಸಕಿ ಶಶಿಕಲಾ, ನಿಪ್ಪಾಣಿ ತಾಲೂಕು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಅಪಘಾತ ಹೆಚ್ಚಾಗುತ್ತವೆ. ಅಲ್ಲದೆ ಹೆರಿಗೆಗಳೂ ಹೆಚ್ಚಾಗುತ್ತಿದ್ದು, ಹೊರರೋಗಿಗಳ ಚಿಕಿತ್ಸೆ ಮತ್ತು ತಾಲೂಕಿನ ಜನಹಿತಕ್ಕಾಗಿ ಶೀಘ್ರದಲ್ಲೇ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ರಿಸಬೇಕೆಂದು ಜೊಲ್ಲೆ ಒತ್ತಾಯಿಸಿದರು.

ದಿನೇಶ್ ಗುಂಡೂರಾವ್ ಹಂತಹಂತವಾಗಿ ಹೊಸ ತಾಲೂಕುಗಳ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಪ್ರಸಕ್ತ ಬಜೆಟ್‌ನಲ್ಲಿಯೂ ಪ್ರಸ್ತಾಪಿಸಲಾಗಿದ್ದು, ಆದ್ಯತೆ ಮೇರೆಗೆ ತಾಲೂಕಾಸ್ಪತ್ರೆ ನಿರ್ಮಿಸಲಾಗುವುದು. ಅಲ್ಲದೆ ಸಮುದಾಯ ಆರೋಗ್ಯ ಕೇಂದ್ರದ ಖಾಲಿಯಿರುವ ಸ್ಥಾನಗಳನ್ನು ತುಂಬಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net