ಸ್ವಾತಂತ್ರ್ಯ ಹೋರಾಟಗಾರರಿಗೆ ನಮಿಸೋಣ

10 ROn 1 A
Published on

ರೋಣ: ಬ್ರಿಟಿಷ್ ಆಡಳಿತದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 75ನೇ ವರ್ಷದ ಹಿನ್ನೆಲೆಯಲ್ಲಿ ಈಗ ನಾವು ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ನಮ್ಮ ಈ ಅದೃಷ್ಟಕ್ಕೆ ಕಾರಣರಾದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡು ಅವರಿಗೆ ನಮಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ರಾಜಣ್ಣಾ ಹೂಲಿ ಹೇಳಿದರು.
ಪಟ್ಟಣದ ಎಲ್.ಐ. ದಿಂಡೂರ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಹಾಗೂ ಭಾಷಣ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಶಶಿಧರ ದಿಂಡೂರ, ದೇವೇಂದ್ರಪ್ಪ ಜಂತ್ಲಿ, ಕುಮಾರ ಅಸೂಟಿ, ದೇವೇಂದ್ರ ಪಿಡ್ಡನಗೌಡ್ರ, ಶಿವರಾಜಕುಮಾರ ದೊಡ್ಡಣ್ಣವರ, ದಾವಲಸಾಬ್ ಸಂಕನೂರ, ನಿವೇದಿತಾ ಬೇವಿನಕಟ್ಟಿ, ಸವಿತಾ ದೊಡ್ಡಣ್ಣವರ, ಸುಮಿತ್ರಾ ಕೊಳಪ್ಪನವರ, ರಮೇಶ ಹೂಗಾರ, ಶಶಿಕಲಾ ಆದಿ, ಶ್ರೀದೇವಿ ಉಪ್ಪಿನಬೇಟಗೇರಿ ಇದ್ದರು.
ಶಾಲೆಯ ಮಕ್ಕಳು ತಿರಂಗ ಧ್ವಜ ಹಿಡಿದು ನೃತ್ಯ ಮಾಡಿದರು. ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೇಷ ಭೂಷಣ ತೊಟ್ಟ ನೂರಾರು ಮಕ್ಕಳು ಕೈಯಲ್ಲಿ ತಿರಂಗಾ ಧ್ವಜ ಹಿಡಿದು ರ‍್ಯಾಲಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net