

ಸಂಡೂರು: ವೀರಶೈವ ಲಿಂಗಾಯತ ಸಮಾಜದಲ್ಲಿರುವ ಒಳಪಂಗಡಗಳನ್ನು ಬದಿಗೊತ್ತಿ ನಾವೆಲ್ಲ ಸಂಘಟಿತರಾಗಿ ಒಂದಾಗಬೇಕಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ತಿಪ್ಪೇಸ್ವಾಮಿ ಹೇಳಿದರು.
ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಬಸವ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ದೇಶ ಕಾಯುವ ಸೈನಿಕ, ಅನ್ನ ಕೊಡುವ ರೈತ ಮತ್ತು ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದರು. ಅಧ್ಯಕ್ಷತೆ ವಹಿಸಿದ್ದ ವೀರಶೈವ ಲಿಂಗಾಯತ ಸಂಘದ ಉಪಾಧ್ಯಕ್ಷ ಪಿ.ರವಿಕುಮಾರ್, ಯಶವಂತನಗರ ಕೆಂಚನಗೌಡ ಮಾತನಾಡಿದರು.
ನಿವೃತ್ತ ವೈದ್ಯ ಡಾ.ರಾಮಶೆಟ್ಟಿ, ಶಿಕ್ಷಕರಾದ ಸರಸ್ವತಿ, ಗೀತಾ, ಸಂಗೀತ ಕಲಾವಿದ ಟಿ.ವೆಂಕಟೇಶ್, ಲಕ್ಷ್ಮೀಪುರದ ಉಮೇಶ್ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಸನ್ಮಾನಿಸಲಾಯಿತು. ಬಳ್ಳಾರಿಯ ಜಿಲಾನ್ ಬಾಷ ನೇತೃತ್ವದಲ್ಲಿ ಶ್ರೀಲಕ್ಷ್ಮೀ ಕಲಾ ಟ್ರಸ್ಟ್‌ನಿಂದ ವಚನ, ಭರತನಾಟ್ಯ, ಜಾನಪದ ನೃತ್ಯ ಪ್ರದರ್ಶಿಸಲಾಯಿತು. ಬಿಕೆಜಿ ಪಾಲುದಾರ ಬಿ.ನಾಗನಗೌಡ, ವೀರಶೈವ ಲಿಂಗಾಯತ ಸಂಘದ ಅಧ್ಯಕ್ಷ ಚಿತ್ರಿಕಿ ಸತೀಶ್ ಕುಮಾರ್, ಬೊಪ್ಪಕಾನ್ ಕೊಮಾರಸ್ವಾಮಿ, ಬಿ.ಜಿ.ಸಿದ್ದನಗೌಡ, ಸುರೇಶ್ ಗೌಡ, ಶ್ರೀಕಂಠ ಹಿರೇಮಠ, ಗಡಾದ್ ರಮೇಶ್, ಕಿನ್ನೂರೇಶ್ವರ, ಎಸ್ಟಿಡಿ ರುದ್ರಗೌಡ, ಬಿ.ಎಂ.ಉಜ್ಜಿನಯ್ಯ ಮಾತನಾಡಿದರು. ಉಪನ್ಯಾಸಕ ಕೆ.ತಿಪ್ಪೇರುದ್ರಪ್ಪ, ಸಂಘದ ಕಾರ್ಯದರ್ಶಿ ಜಿ.ವಿರೇಶ್ ನಿರ್ವಹಿಸಿದರು.