ಉತ್ತಮ ಸಮಾಜಕ್ಕೆ ಜವಾಬ್ದಾರಿ ಅರಿಯಲಿ

NVL SAMROPA
Published on

ನವಲಗುಂದ: ಪದವಿ ಮುಗಿಸಿ ಉತ್ತಮ ನಾಗರಿಕರಾದರಷ್ಟೇ ಸಾಲದು. ತಮ್ಮ ಜವಾಬ್ದಾರಿಗಳು ತುಸು ಹೆಚ್ಚಾದವು ಎಂಬ ಅಭಿಪ್ರಾಯ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಬರಬೇಕು. ಅಂದಾಗ ಉತ್ತಮ ಸಮಾಜ ನಿರ್ವಿುಸಲು ಸಾಧ್ಯ ಎಂದು ಪಿಎಸ್​ಐ ಜನಾರ್ದನ ಭಟ್ರಹಳ್ಳಿ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನಲ್ಲಿ 2024- 25ನೇ ಸಾಲಿನ ಬಿಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕ್ರೀಡಾ, ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಾಲಕರ ಕಷ್ಟಗಳನ್ನು ಅರಿತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದುವರಿಯಲು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಶಿಕ್ಷಣದ ಮಹತ್ವ ಅರಿತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡುವ ಮೂಲಕ ಹೆತ್ತವರು, ಗುರುಗಳು ಹಾಗೂ ಕಾಲೇಜಿಗೆ ಕೀರ್ತಿ ತರಬೇಕು ಎಂದರು.

ಡಾ. ಸಂತೋಷ ಹುಬ್ಬಳ್ಳಿ, ಗಣೇಶ ಧೊಂಗಡಿ, ಡಾ. ಐ.ಬಿ. ಸಾತಿಹಾಳ, ಡಾ ಎನ್.ಎನ್. ಕುರ್ಡೆಕರ, ಪೊ›.ಬಿ.ವಿ. ಏಣಗಿ, ಶ್ರೀಧರ ಲೋಣಕರ, ಪೊ›. ಸವಿತಾ ಚಿಕ್ಕಣ್ಣವರ, ಪೊ›. ವಿನಾಯಕ ಮೀರಜಕರ್, ವೈ.ಎನ್. ಗುಳಗುಂದಿ, ವೀರಭದ್ರಪ್ಪ ಮರಡಿ, ಚಂದ್ರು ಪಠಾಣಿ, ಬಿ.ಎಸ್. ಕೂಡ್ಲನವರ, ರೇಣುಕಾ ಬಾಜಿರಾವತ್, ಸವಿತಾ ಜಲಿಗೇರಿ, ರೂಪಾ ಕೊಷ್ಟಿ, ರವಿ ಬ್ಯಾಹಟ್ಟಿ, ಪ್ರತಿಭಾ ನಿಡಗುಂದಿ ಇತರರಿದ್ದರು. ಪ್ರಾಂಶುಪಾಲ ಡಾ.ಎಂ.ಬಿ. ಬಾಗಡಿ, ಡಾ. ಪ್ರಸನ್ನ ಪಂಢ, ನವೀನ ಮರಿಗೌಡರ ಹಾಗೂ ಸಂಜನಾ ಗಣಾಚಾರಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net