ಪ್ಲಾಸ್ಟಿಕ್ ತರಲಿರುವ ವಿಪತ್ತು ತಪ್ಪಿಸೋಣ

06 HLR 1
Published on

ಹೊಳೆಆಲೂರ: ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಪ್ಲಾಸ್ಟಿಕ್ ಭೂಮಿ. ಸಾಗರವಷ್ಟೇ ಅಲ್ಲ ಆಹಾರ, ಮಿದುಳು, ದೇಹದಲ್ಲಿ ಹರಿದಾಡುವ ರಕ್ತದಲ್ಲಿಯೂ ಸೇರಿಕೊಂಡಿದೆ. ಪ್ಲಾಸ್ಟಿಕ್ ತರಲಿರುವ ವಿಪತ್ತು ತಪ್ಪಿಸಲು ಮುಂದಾಗಬೇಕಿದೆ ಎಂದು ನರಗುಂದ ತಾಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಾಲತಿ ದಿನೇಶ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಯಚ್ಚರೇಶ್ವರ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ಲಾಸ್ಟಿಕ್ ಪರಿಸರ ಸೇರುವುದನ್ನು ತಡೆಯಲು ಪ್ರತಿಯೊಬ್ಬರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಪ್ರಕೃತಿ ಉಚಿತವಾಗಿ ನೀಡಿರುವ ಶುದ್ಧ ನೀರು, ಗಾಳಿ, ಬೆಳಕು, ಕಾಡು ಸಂರಕ್ಷಣೆ ಮಾಡಿ ನೆಮ್ಮದಿಯ ಜೀವನ ನಡೆಸುವುದರ ಜತೆಗೆ ಮುಂದಿನ ಪೀಳಿಗೆಗೆ ಅನಾನುಕೂಲವಾಗದಂತೆ ಮುಂಜಾಗ್ರತೆ ವಹಿಸಬೇಕಾಗಿದೆ ಎಂದು ಹೇಳಿದರು.

ಎ.ಎನ್. ಬಡಿಗೇರ ಅಧ್ಯಕ್ಷತೆ ವಹಿಸಿದ್ದರು, ಪಾಂಡುರಂಗ ಪತ್ತಾರ, ಶ್ರೀಶೈಲ ಬಾದಾಮಿ, ವೀರಯ್ಯ ವಸ್ತ್ರದ, ಸುರೇಶ ಗಾಣಿಗೇರ, ಅಮಿತಕುಮಾರ ಹಿರೇಮಠ, ಬಿ.ಎಫ್. ಬಾಲನಗೌಡ್ರ, ಶಾಂತೇಶ ಆಡಿನ, ಮಹಾದೇವಪ್ಪ ನೈನಾಪುರ, ರವಿ ಚವ್ಹಾಣ, ಸುನಿಲ ಎಲಿಗಾರ, ವಿದ್ಯಾ ಅಣ್ಣಿಗೇರಿ, ಮೀನಾಕ್ಷಿ ಬಡಿಗೇರ, ಆರ್.ಕೆ.ಚವ್ಹಾಣ, ಮಮತಾ ಬಾದಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net