

ಮುಳಬಾಗಿಲು: ಕನ್ನಡ ಭಾಷೆಗೆೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಪ್ರತಿಯೊಬ್ಬರೂ ಸಹ ಕನ್ನಡ ನಾಡು&ನುಡಿಯನ್ನು ಪ್ರೀತಿಸಬೇಕು. ಭಾಷೆಯನ್ನು ಬಳಸಿ ಬೆಳೆಸುವ ಕೆಲಸವಾಗಬೇಕು ಎಂದು ತಹಸೀಲ್ದಾರ್ ವಿ.ಗೀತಾ ಹೇಳಿದರು.
ನಗರದ ಅಗ್ರಹಾರದ ವಿಠಲಕುಂಟೆ ಸಮೀಪದ ಗಾಯತ್ರಿ ದೇವಾಲಯ ಸಮುದಾಯ ಭವನದಲ್ಲಿ ಗುರುವಾರ ಕರುನಾಡ ಕನ್ನಡ ಸಂಘದಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಹಾಗೂ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಕನ್ನಡ ವಿಷಯದಲ್ಲಿ 125 ಅಂಕ ಪಡೆದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಜ್ಞಾನಪೀಠ ಪ್ರಶಸ್ತಿ ಸೇರಿ ಪದ್ಮಭೂಷಣ, ಪದ್ಮ-ವಿಭೂಷಣ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಎಲ್ಲ ರೀತಿಯ ಪ್ರಶಸ್ತಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯ ಲೋಕಕ್ಕೆ ದೊರೆತಿವೆ. ಹಾಗಾಗಿ ಎಲ್ಲರಲ್ಲೂ ಸಹ ಕನ್ನಡದ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ರಾಜ ಮಹಾರಾಜರ ಕಾಲದಿಂದ ಇಂದಿನವರೆಗೂ ಸಹ ಕನ್ನಡ ಭಾಷೆತನ್ನ ಸಾರ್ವಭೌಮತ್ವ ಎತ್ತಿ ಹಿಡಿದಿದೆ. ಅಲ್ಲದೆ, ಶಾಸ್ತ್ರೀಯ ಸ್ಥಾನಮಾನ ಪಡೆದಿದೆ. ಇತರೆ ಭಾಷಿಕರು ನಮ್ಮ ಭಾಷೆಯನ್ನು ಅವಹೇಳನ ಮಾಡಿದರೆ ನಾಡಿನ ಯುವ ಜನತೆ ನಿಂದಕರಿಗೆ ಸಿಂಹ ಸ್ವಪ್ನವಾಗಬೇಕು. ಇತರ ಭಾಷಿಕರ ಅವಹೇಳನ ಖಂಡಿಸಬೇಕು ಎಂದು ಕಿವಿ ಮಾತು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಎನ್. ಬಿ. ಗೋಪಾಲಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಭಾಷೆಯ ಆಯಕಟ್ಟು ಇರುವುದಿಲ್ಲ. ಏಕೆಂದರೆ, ಅವರ ವಿದ್ಯಾಭ್ಯಾಸದಲ್ಲಿ ಹಲವಾರು ವಿಷಯಗಳು ಇರುತ್ತವೆ. ಅದರಲ್ಲಿ ಕನ್ನಡ ಭಾಷೆಯೂ ಇರುತ್ತದೆ. ಇದಕ್ಕೆ ಮೊದಲ ಪ್ರಾಶಸನೀಡಬೇಕು ಎಂದು ಸಲಹೆ ನೀಡಿದರು.
ಕನ್ನಡ ಮತ್ತು ಸಂಸತಿ ಇಲಾಖೆ ನಿವೃತ್ತ ಸಹಾಯ ನಿರ್ದೇಶಕ ಬಿ. ಎಸ್. ವೆಂಕಟಾಚಲಪತಿ ಮಾತನಾಡಿ, ಮಕ್ಕಳಲ್ಲಿ ಪರಿಸರ ರಕ್ಷಣೆ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ಉತ್ತಮ ವಾತಾವರಣ ನಿಮಾರ್ಣ ಮಾಡಬಹುದು ಎಂದರು.
ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ, ಎಸ್ಡಿಸಿ ಪ್ರಾಂಶುಪಾಲ ಮುರಳಿಕೃಷ್ಣ, ಬ್ರಾಹ್ಮಣರ ಸಂಘ ಅಧ್ಯಕ್ಷ ಬಿ.ಎಸ್. ಶ್ರೀನಿವಾಸಮೂರ್ತಿ, ಕರುನಾಡು ಕನ್ನಡ ಸಂಘದ ಅಧ್ಯಕ್ಷ ಈ.ಶ್ರೀನಿವಾಸ ಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ. ಜನಾರ್ಧನ್, ಕಾರ್ಯದರ್ಶಿಗಳಾದ ನಂದ ಕಿಶೋರ್, ಉತ್ತನೂರು ಆರ್. ಅರುಣ್ಕುಮಾರ್, ಉಪಾಧ್ಯಕ್ಷ ಸಿದ್ದಲಿಂಗಯ್ಯ, ಸಹ ಕಾರ್ಯದರ್ಶಿಗಳಾದ ಶ್ರೀರಾಮ್, ಎಂ.ಶಿವಣ್ಣ ಇದ್ದರು.