ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಲಿ

6Mamdapur2
Published on

ಮಮದಾಪುರ: ಭವಿಷ್ಯದ ಹಿತೃದೃಷ್ಟಿಯಿಂದ ಪರಿಸರ ಉಳಿವು ಬಹುಮುಖ್ಯವಾಗಿದೆ. ಪ್ರತಿಯೊಂದು ಜೀವಿಯು ಪರಿಸರದ ಮೇಲೆ ಅವಲಂಬಿತವಾಗಿದೆ. ಹೀಗಾಗಿ, ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ತಾಪಂ ಇಒ ಪರಶುರಾಮ ಘಸ್ತೆ ಹೇಳಿದರು.

ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ವಿಶ್ವ ಪರಿಸರ ಅಂಗವಾಗಿ ಜಿಪಂ, ತಾಪಂ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಿಡಿಒ ವಿನಾಯಕ್ ಮಾಳಿ ಪ್ಲಾಸ್ಟಿಕ್ ಬಳಕೆ ಮುಕ್ತ ಪ್ರತಿಜ್ಞಾವಿಧಿ ಬೋಧಿಸಿದರು. ಮರಗಳ ನಾಶದಿಂದಾಗುವ ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ನಾಟಕ ಪ್ರದರ್ಶಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ಲಾಸ್ಟಿಕ್ ಮುಕ್ತ ಸಮಾಜ ಜಾಗೃತಿ ಮೂಡಿಸಲಾಯಿತು.

ಬಿಇಒ ಜಿ.ಬಿ.ಬಳಗಾರ, ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿಗಳಾದ ಆನಂದ ಹೆಗಡೆ, ಇಮ್ರಾನಬೇಗ್ ಮುಲ್ಲಾ, ಗ್ರಾಮ ಆಡಳಿತಾಧಿಕಾರಿ ವಿ.ಎ.ಪಮ್ಮಾರ, ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಗೋಪಾಳಿ, ಗ್ರಾಪಂ ಸದಸ್ಯರಾದ ಎಸ್.ಜಿ.ಕಮತ್, ವೀರಭದ್ರ ಮೈಲನ್ನವರ, ಮುಖ್ಯಶಿಕ್ಷಕರಾದ ಆರ್.ಬಿ.ಬೆಟಿಗೇರಿ, ಎಸ್.ಜಿ.ಥೋರಾತ್, ರವೀಂದ್ರ ದೇಮಶೆಟ್ಟಿ ಎಂ.ಬಿ.ಹಾದಿಮನಿ, ಎ.ಎಂ.ಕಮತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net