ಸರ್ವರೂ ಒಗ್ಗೂಡಿ ಬಾಳಲಿ

2 KMP 03
ಕಂಪ್ಲಿ ಬಲಿಜ ಭವನದಲ್ಲಿ ಆಯೋಜಿಸಿದ್ದ ಮಹಾಕಾರ್ತಿಕೋತ್ಸವಕ್ಕೆ ದೇವಲಾಪುರ ತಬಲಾವಾದಕ ವಿರೂಪಾಕ್ಷಪ್ಪ ಚಾಲನೆ ನೀಡಿದರು. ಪ್ರಮುಖರಾದ ಪಿ.ಶ್ರೀನಿವಾಸ, ಇಂಗಳಗಿ ನಾರಾಯಣಪ್ಪ, ಶಾರದಾ ಲೋಕೇಶ, ಕೆ.ಶಂಕರ ಇತರರಿದ್ದರು.
Published on

ಕಂಪ್ಲಿ: ಮನಸ್ಸಿನ ಅಜ್ಞಾನವನ್ನು ತೊಳೆಯುವುದೇ ಕಾರ್ತಿಕ ದೀಪೋತ್ಸವದ ಉದ್ದೇಶವಾಗಿದೆ ಎಂದು ತಾಲೂಕು ಬಲಿಜ ಸಂಘದ ಗೌರವ ಅಧ್ಯಕ್ಷ ಪಿ.ಶ್ರೀನಿವಾಸ ಹೇಳಿದರು.

ಪಟ್ಟಣದ ಮಾರುತಿನಗರದ ಬಲಿಜ ಭವನದಲ್ಲಿ ಶ್ರೀಯೋಗಿ ನಾರೇಯಣ ಯತೀಂದ್ರರ 8ನೇ ವರ್ಷದ ಮಹಾಕಾರ್ತಿಕ ದೀಪೋತ್ಸವ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.

ಎಲ್ಲೆಡೆ ಜ್ಞಾನದ ದೀಪ ಬೆಳಗಿಸುವ ಸಂಕೇತವಾಗಿ ದೀಪೋತ್ಸವ ಆಚರಿಸಲಾಗುತ್ತದೆ. ಸರ್ವರೂ ಒಗ್ಗೂಡಿ ಬಾಳಿ ಬದುಕಬೇಕು ಎಂದು ಹೇಳಿದರು.

ದೇವಲಾಪುರದ ತಬಲಾವಾದಕ ವಿರೂಪಾಕ್ಷಪ್ಪ ಕಾರ್ತೀಕೋತ್ಸವಕ್ಕೆ ಚಾಲನೆ ನೀಡಿದರು. ಜವುಕಿನ ಶಿವಮೂರ್ತೆಪ್ಪ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಮಹಿಳಾ ತಾಲೂಕು ಬಲಿಜ ಸಂಘದ ಅಧ್ಯಕ್ಷೆ ಶಾರದಾ ಲೋಕೇಶ, ಬಲಿಜ ಸಂಘದ ಉಪಾಧ್ಯಕ್ಷ ಕೆ.ಶಂಕರ, ಕಾರ್ಯದರ್ಶಿ ಇಂಗಳಗಿ ನಾರಾಯಣಪ್ಪ, ಪ್ರಮುಖರಾದ ಎಂ.ಆರ್.ಶ್ರೀನಿವಾಸ, ಎಂ.ರಮೇಶ, ಪಿ.ವೆಂಕೋಬಣ್ಣ, ಡಿ.ಸತೀಶ, ಕೆ.ಅನಿಲ್, ಡಿ.ಶ್ರೀನಿವಾಸ, ಎಂ.ಪ್ರಕಾಶ, ಪಿ.ಮಹಾಬಲಿ, ಕಾಳಿಂಗವರ್ಧನ ಹಾದಿಮನಿ, ಭವ್ಯಾ, ಕೆ.ಪದ್ಮಾವತಿ, ಆರತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net