ಪರಿಸರ ಮರುಸೃಷ್ಟಿಗೆ ಎಲ್ಲರೂ ಕೈಜೋಡಿಸಿ

ಯಲಬುರ್ಗಾ ಹಿರೇಮ್ಯಾಗೇರಿಯಲ್ಲಿ ತಾಯಿ ಹೆಸರಿನಲ್ಲಿ ಒಂದು ಗಿಡ ಕಾರ್ಯಕ್ರಮವನ್ನು ಜಿಲ್ಲಾ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾಯತ್ರಿ ಲೋಕಣ್ಣನವರ ಉದ್ಘಾಟಿಸಿದರು. ತಾಲೂಕು ಅರಣ್ಯ ಇಲಾಖೆ ವಲಯ ಅರಣ್ಯ ಅಧಿಕಾರಿಗಳಾದ ಬಸವರಾಜ ಗೋಗೇರಿ, ಬಾಬುರಾವ್, ಗ್ರಾಪಂ ಕಾರ್ಯದರ್ಶಿ ಮಹಾಂತೇಶ ಬಾಳಿಕಾಯಿ ಇತರರಿದ್ದರು.

Published on

ಯಲಬುರ್ಗಾ: ಮರಗಳ ಸಂರಕ್ಷಣೆಯಲ್ಲಿ ಸಮುದಾಯದ ಸಹಭಾಗಿತ್ವ ಸಾಧಿಸಲು ತಾಯಿ ಹೆಸರಿನಲ್ಲಿ ಒಂದು ಗಿಡ ಯೋಜನೆಯಡಿ ಸರ್ಕಾರ ಪರಿಸರ ಸಂರಕ್ಷಣೆ ಕಾರ್ಯಕ್ಕೆ ಮುಂದಾಗಿದ್ದು, ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾಯತ್ರಿ ಲೋಕಣ್ಣನವರ ಹೇಳಿದರು.

ತಾಲೂಕಿನ ಹಿರೇಮ್ಯಾಗೇರಿ ಗ್ರಾಪಂ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಹಿರೇಮ್ಯಾಗೇರಿಯಿಂದ-ಬಸವಣ್ಣನ ಗುಡಿವರೆಗೆ ಮಾನ್ಸೂನ್ ನೆಡುತೋಪು ಕಾಮಗಾರಿ ಸ್ಥಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾಗತೀಕರಣ ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರೀಕರಣ, ಕೈಗಾರೀಕರಣ, ಹೆದ್ದಾರಿಗಳು ವಿವಿಧ ಯೋಜನೆಗಳಿಂದ ಕೋಟ್ಯಂತರ ಮರಗಿಡಗಳು ನಾಶವಾಗುತ್ತಿವೆ. ಆದ್ದರಿಂದ ಪರಿಸರ ಮರುಸೃಷ್ಟಿ ಅವಶ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net