

ಗೋಕಾಕ: ಮಾನವ ಜೀವನದ ಸಾಲ್ಯಕ್ಕೆ ವಚನಗಳೇ ಮಹಾಮಂತ್ರಗಳು. ವಚನಗಳ ಕಂಠಪಾಠ ಮಾಡಿದರೆ ಸಾಲದು. ಅವುಗಳ ನೆಜ ಅರ್ಥ ಅರಿತು ಬಾಳಬೇಕು ಎಂದು ಹೊಸೂರದ ಅನ್ನಪೂರ್ಣಾ ತಾಯಿ ಹೇಳಿದರು.
ನಗರದ ಶೂನ್ಯ ಸಂಪಾದನ ಮಠದಲ್ಲಿ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 184ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಸವಾದಿ ಶರಣರು ಬಿತ್ತಿದ ಬೀಜ ಇಂದು ಹುಲುಸಾಗಿ ಬೆಳೆದು ಜಗತ್ತಿಗೆ ಲ ನೀಡುತ್ತಿದೆ. ಶರಣರು ಹೊತ್ತಿಸಿದ ದೀಪ ಜಗತ್ತಿಗೆ ಬೆಳಕು ನೀಡುತ್ತಿದೆ. ಬಸವಣ್ಣನವರ ವಚನಗಳೇ ನಮ್ಮ ಸಂವಿಧಾನದ ಜೀವಾಳ. ಬಸವಣ್ಣನವರು ಈ ನೆಲದ ಪ್ರಜಾಪ್ರಭುತ್ವ ಹಕ್ಕುಗಳ ಮೂಲಪುರುಷ. ಬಸವಣ್ಣನವರ ಆದರ್ಶಗಳನ್ನು ಅಳವಡಿಸಿಕೊಂಡರೆ ಜೀವನಕ್ಕೆ ಒಂದು ಅರ್ಥ ಬರುತ್ತದೆ ಎಂದರು.
ಸಾನ್ನಿಧ್ಯವನ್ನು ಶೂನ್ಯ ಸಂಪಾದನಠದ ಪೀಠಾಧಿಪತಿ ಮುರುರಾಜೇಂದ್ರ ಸ್ವಾಮೀಜಿ, ಲೋಕಾಪುರದ ಮಹಾಂತ ದೇವರು ವಹಿಸಿದ್ದರು. ಬಸನಗೌಡ ಪಾಟೀಲ ಅಧ್ಯತೆ ವಹಿಸಿದ್ದರು. ಡಾ.ಸಿ.ಕೆ. ನಾವಲಗಿ, ಭಾರತಿ ಮರೆನ್ನವರ, ಪ್ರೀತಿ ಕುರಬೇಟ, ಶೆಲಾ ಬಿದರಿ, ಎಸ್.ಕೆ ಮಠದ,ಆರ್.ಎಲ್.ಮಿರ್ಜಿ ವಂದಿಸಿದರು.