

ಶೃಂಗೇರಿ: ಪರಿಸರದ ಉಳಿವಿಗಾಗಿ ಗ್ರಾಮದ ಸ್ವಚ್ಛತೆಗೆ ಪ್ರತಿಯೊಬ್ಬರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಮೆಣಸೆ ಗ್ರಾಪಂ ಅಧ್ಯಕ್ಷೆ ಸಂಧ್ಯಾ ಮರಿಯಪ್ಪ ಹೇಳಿದರು.
ತಾಪಂ ಮತ್ತು ಮೆಣಸೆ ಗ್ರಾಪಂ ಸಹಯೋಗದೊಂದಿಗೆ ಶನಿವಾರ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಸರ ಸ್ವಚ್ಛತೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿ ಕೆಲಸ ಮಾಡುತ್ತಿದೆ. ನಾವು ಅದರ ಸದ್ಭಳಕೆ ಮಾಡಿಕೊಂಡು ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.ಆನಾರೋಗ್ಯ ಉಂಟಾಗಲು ಪರಿಸರ ಮಾಲಿನ್ಯ ಮುಖ್ಯ ಕಾರಣ ಎಂಬ ಜಾಗೃತಿ ನಮ್ಮಲ್ಲಿ ಪರಿಮೂಡಿದಾಗ ಮಾತ್ರ ಪರಿಸರದ ಸೌಂದರ್ಯತೆ ಹೆಚ್ಚುತ್ತದೆ ಎಂದರು.
ಗ್ರಾಪಂ ಸದಸ್ಯರಾದ ಸುಷ್ಮಾ ಸುರೇಂದ್ರ, ರಾಜು ಶೂನ್ಯ, ಯೋಗೀಶ್, ಸುಮಲತಾ, ಪಿಡಿಒ ನಾಗಭೂಷಣ್, ನರೇಗಾ ಸಹಾಯಕ ನಿರ್ದೇಶಕ ಸಂದೀಪ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಸಿಮನೆ ಶಿವಶಂಕರ್ ಹಾಜರಿದ್ದರು.